ಕಡಬ: ನಾಪತ್ತೆಯಾಗಿದ್ದ ಹತ್ತನೇ ತರಗತಿ ಬಾಲಕಿ ಪತ್ತೆ



(ನ್ಯೂಸ್ ಕಡಬ) newskadaba.com ಕಡಬ, ಡಿ.30. ಶಾಲೆಗೆಂದು ಮನೆಯಿಂದ ತೆರಳಿದ ಅತ್ತ ಶಾಲೆಗೂ ತೆರಳದೆ, ಇತ್ತ ಮನೆಗೂ ಬಾರದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯನ್ನು ಕಡಬ ಪೊಲೀಸರು ಹುಣಸೂರಿನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.





ಆತೂರು ಸಮೀಪದ ಖಾಸಗಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯು ಗುರುವಾರದಂದು ಮುಂಜಾನೆ ಎಂದಿನಂತೆ ಶಾಲೆಗೆಂದು ತನ್ನ ಆಲಂಕಾರಿನ ಮನೆಯಿಂದ ತೆರಳಿದ್ದು, ಶಾಲೆಗೆ ಹೋಗದೆ ಪರೀಕ್ಷೆಗೆ ಗೈರು ಹಾಜರಾದ ಬಗ್ಗೆ ಅಧ್ಯಾಪಕರು ಮನೆಯವರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸಂಬಂಧಿಕರಲ್ಲಿ ಹಾಗೂ ನೆರೆಕರೆಯವರಲ್ಲಿ ವಿಚಾರಿಸಿ ಪತ್ತೆಯಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ತಂದೆ ಕಡಬ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಡಬ ಠಾಣಾ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ‌ ಹಾಗೂ ಸಿಬ್ಬಂದಿಗಳು ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ವಿದ್ಯಾರ್ಥಿನಿಗಾಗಿ ಹುಡುಕಾಡಿದ್ದು, ಕೊನೆಗೆ ಹುಣಸೂರಿನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.






error: Content is protected !!
Scroll to Top