(ನ್ಯೂಸ್ ಕಡಬ) newskadaba.com.ಕಡಬ, ಡಿ.29 ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕ ಕ್ರಿಡೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಡಿ.28ರಂದು ನಡೆಯಿತು. ಶಾಲೆಗೆ ನೂತನವಾಗಿ ನಿರ್ಮಿಸಲಾದ ಆವರಣಗೋಡೆಯನ್ನು ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಉದ್ಘಾಟಿಸಿ ಮಾತನಾಡಿ, ನೂಜಿಬಾಳ್ತಿಲ ಗ್ರಾ.ಪಂ. ಉ.ಹಿ.ಪ್ರಾ. ಶಾಲೆ ಹಾಗೂ ಇಲ್ಲಿಯ ಅಂಗನವಾಡಿ ಕೇಂದ್ರ ಒಳಗೊಂಡಂತೆ ಅತ್ಯುತ್ತಮವಾದ ಆವರಣ ಗೋಡೆ(ಕಂಪೌಂಡ್) ನಿರ್ಮಿಸಿದ್ದು ಶಾಲಾ ಪ್ರಮುಖ ದ್ವಾರವನ್ನು ಕೂಡ ರಚಿಸಲಾಗಿದೆ. ಇವತ್ತು ಈ ಕಂಪೌಂಡ್ ಉದ್ಘಾಟನೆ ನೆರವೇರಿಸುವ ಮೂಲಕ ಶಾಲಾ ವಠಾರದಲ್ಲಿ ಸಾರ್ವಜನಿಕವಾಗಿ ತ್ಯಾಜ್ಯ, ಕಸ ಕಡ್ಡಿಗಳನ್ನು ಹಾಕುವುದನ್ನು ನಿಲ್ಲಿಸಿ, ಶುಚಿತ್ವ ಕಾಪಾಡುವುದರೊಂದಿಗೆ, ಈಗಾಗಲೇ ಸ್ವಚ್ಚ ಗ್ರಾ.ಪಂ.ಆಗಿ ಪ್ರಶಸ್ತಿ ಪಡೆದ ನಮ್ಮ ಗ್ರಾ.ಪಂ. ಯಾವತ್ತೂ ಸ್ವಚ್ಚವಾಗಿರಬೇಕಾಗಿ. ಈ ನಿಟ್ಟಿನಲ್ಲಿ ವ್ಯಾಪಾರಸ್ಥರು, ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿ, ಬಳಿಕ ನಡೆದ ಕ್ರೀಡೋತ್ಸವದಲ್ಲಿ ಭಾಗವಹಿಸಿ ಶುಭಹಾರೈಸಿದರು.
ಪ್ರವೇಶ ದ್ವಾರ ಕೊಡುಗೆಯಾಗಿ ನೀಡಿದ ಪ್ರಗತಿಪರ ಕೃಷಿಕ ಬಾಲಕೃಷ್ಣ ಗೌಡ ಸಾಂತ್ಯಡ್ಕ ಪ್ರವೇಶ ದ್ವಾರವನ್ನು ಉದ್ಘಾಟಿಸಿ ಶುಭಹಾರೈಸಿದರು.ಕಂಪೌಂಡ್ ಉದ್ಘಾಟನೆಯ ಬಳಿಕ ನಡೆದ ಶಾಲಾ ಕ್ರೀಡೋತ್ಸವ ಸಮಾರಂಭದ ದಲ್ಲಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದೇ ಕಂಪೌಂಡ್‍ನೊಳಗೆ ಇದ್ದ ಪಂಚಾಯತ್, ಶಾಲೆ, ಹಾಗೂ ಅಂಗನವಾಡಿ ಪ್ರತ್ಯೇಖ ಕಂಪೌಂಡ್‍ನೊಂದಿಗೆ ಅತ್ಯುತ್ತಮವಾದ ಒಂದು ಶಾಲಾ ದ್ವಾರವನ್ನು ನಿರ್ಮಿಸಿ ಇಂದು ಉದ್ಘಾಟಿಸಲಾಗಿದೆ. ಈ ಶಾಲೆಯಲ್ಲಿ ವರ್ಷದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು. ನಾವೆಲ್ಲ ಒಂದಾಗಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುತ್ತಿದ್ದೇವೆ, ಇಂದು ವಾರ್ಷಿಕ ಕ್ರೀಡಾಕೂಟ ಕೂಡ ನಡೆಯುತ್ತಿದ್ದು, ವಿದ್ಯಾರ್ಥಿಗಳುಪಾಠದೊಂದಿಗೆ, ಆಟವನ್ನು ಕೂಡಾ ಆಡುವ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಪೋಷಕರಾದ ನಾವು ಸರಕಾರಿ ಶಾಲೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಮಕ್ಕಳೊಂದಿಗೆ ಸೇರಿಕೊಳ್ಳುವ ಮೂಲಕ ಅವರಲ್ಲಿ ಚೈತನ್ಯ ಮೂಡಿಸುವಂತಾಗಬೇಕು ಶಿಕ್ಷಕರು ಪಾಠದೊಂದಿಗೆ, ಸಂಸ್ಕಾರಯುತ ಶಿಕ್ಷಣ ಮಕ್ಕಳಿಗೆ ಅರಿವು ಮೂಡಿಸಬೇಕೆಂದರು.
ಉಪ್ಪಿನಂಗಡಿ ಪವರ್ ಜೋನ್ ಜಿಮ್ ಮಾಲಕ ಬಾಲಕೃಷ್ಣ ಗೌಡ ಶಾಂತಿಗುರಿ ಕ್ರೀಡಾ ಧ್ವಜಾರೋಹನ ನೆರವೇರಿಸಿ, ಮಾತನಾಡಿ ನಮ್ಮ ಶಾರೀರಿಕ, ಮಾನಸಿಕ ನೆಮ್ಮದಿಯನ್ನು ಕ್ರೀಡೆಯಿಂದ ಪಡೆದುಕೊಳ್ಳಲು ಸಾಧ್ಯವಾಗಿದ್ದು ವ್ಯಾಯಾಮದ ಮೂಲಕ ದೇಹದ ಆರೋಗ್ಯ ಸುದಾರಣೆಗೆ ಕ್ರೀಡೆಯು ಅತೀ ಅಗತ್ಯ ಎಂದರು.ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಜಾಲು ಕ್ರೀಡಾ ಜ್ಯೋತಿ ಬೆಳಗಿಸಿ ಶುಭಹಾರೈಸಿದರು.ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆನಂದ ಗೌಡ, ಪಂ.ಸದಸ್ಯರಾದಕೆ.ಜೆ.ತೋಮಸ್, ರಾಮಚಂದ್ರ ಗೌಡ ಎಸ್., ರಜಿತಾ ಪದ್ಮನಾಭ, ಪತ್ರಕರ್ತ ಖಾದರ್ ಸಾಹೇಬ್, ಗ್ರಾ.ಪಂ.ಮಾಜಿ ಸದಸ್ಯ ತಮ್ಮಯ್ಯ ಗೌಡ ಬಳ್ಳೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಕಮಾಲಾಕ್ಷಿ ಬರೆಮೇಲು, ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ., ಶಾಲಾ ಶಿಕ್ಷಕರಾದ ಲೂಸಿ, ಶ್ರೀಲತಾ, ಸಚಿದೇವಿ, ಗೀತಾ, ಗೌರವ ಶಿಕ್ಷಕಿ ಕಾವ್ಯ ಸಹಕರಿಸಿದರು. ಶಾಲಾ ಮುಖ್ಯ ಶಿಕ್ಷಕ ಶ್ರೇಯಾಂಸ್ ಎ.ಎಚ್.ಸ್ವಾಗತಿಸಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಎಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದರೆಲ್ಲರಿಗೂ ಬೆಳಗಿನ ಉಪಹಾರ, ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಾಗಿ, ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ, ಶಾಲಾಭಿವೃದ್ಧಿಗೆ ಶ್ರಮಿಸಿದ ಮೋನಪ್ಪ ಗೌಡ ಅರಿಮಜಲು ಹಾಗೂ ಶಾಲಾಭಿವೃದ್ಧಿಗೆ ಕೈಜೋಡಿಸಿಕೊಂಡು, ಶಾಲಾ ಕಾರ್ಯಕ್ರಮಗಳಲ್ಲಿ ಪಾಕತಜ್ಞರಾಗಿ ಸಹಕರಿಸುತ್ತಿರುವ ಪ್ರಶಸ್ತಿ ವಿಜೇತ ನೂಜಿಬಾಳ್ತಿಲ ಅಂಚೆ ಕಚೇರಿ ಅಂಚೆ ಪಾಲಕ ಜಿನೇಂದ್ರ ಜೈನ್ ರವರನ್ನು ಶಾಲಾ ವತಿಯಿಂದ ಹಿರಿಯರಾಧ ಬಾಲಕೃಷ್ಣ ಗೌಡ ಸಾಂತ್ಯಡ್ಕ ರವರು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ, ಗೌರವಿಸಿದರು. ಶಾಲೆಗೆ ಅಲ್ಯೂಮಿನಿಯಂ ಏಣಿಯೊಂದನ್ನು ಕೊಡುಗೆಯಾಗಿ ನೀಡಿದ ಗಣಪಯ್ಯ ಗೌಡ ಕಲ್ನಾರು ಹಾಗೂ ಶಾಲೆಯ ಹಿಂಭಾಗದ ಕಂಪೌಂಡ್‍ಗೆ ಗೇಟ್ ನಿರ್ಮಿಸಿಕೊಟ್ಟ ಡೀಕಯ್ಯ ಗೌಡ ಪಾಲೆತ್ತಡಿ ಇವರನ್ನು ಶಾಲಾ ವತಿಯಿಂದ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಲಕ್ಷ್ಮಣ ಗೌಡ ಸ್ಮರಣಿಕೆ ನೀಡಿ ಗೌರವಿಸಿದರು., ಶಾಲಾ ಕ್ರೀಡಾಪಟು, ಶಾಲಾ ನಾಯಕ ವಿಕಾಸ್ ಹಾಗೂ ಶಾಲೆಯ ಪ್ರತಿಭಾನ್ವಿತ ಕ್ರೀಡಾ ವಿದ್ಯಾರ್ಥಿಗಳಾದ ವಿನಿತ್, ದೀಕ್ಷಿತಾ, ಸೌಮ್ಯ, ಚೈತನ್ಯ ರವರನ್ನು ಗೌರವಿಸಲಾಯಿತು. ವಾರ್ಷಿಕ ಕ್ರೀಡೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಲಾಯಿತು. ಸ್ಪರ್ದಾ ವಿಜೇತರಿಗೆ ಬಹುಮಾನವನ್ನು ಉಪ್ಪಿನಂಗಡಿ ಪವರ್ ಜೊಮ್ಜಿಮ್ ಮಾಲಕ ಬಾಲಕೃಷ್ಣ ಗೌಡ ಶಾಂತಿಗುರಿ ಬಹುಮಾನಗಳನ್ನು ಕೊಡುಗೆಯಾಗಿ ನೀಡಿ ಸಹಕರಿಸಿದರು.