ಕುಟ್ರುಪ್ಪಾಡಿ: ಬೈಕ್ ಗಳ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com.,ಪುತ್ತೂರು, ಡಿ.29  ಪುತ್ತೂರು ತಾಲೂಕು ಕುಟ್ರುಪ್ಪಾಡಿ  ಗ್ರಾಮ ನೆಲಿವಿಳ ಮನೆ,  ಜಾನ್ಸನ್  ಎಂಬವರ ಪುತ್ರ  ಅಜೀಶ್ ಜಾನ್ಸನ್ ಎಂಬುವರು ದಿನಾಂಕ  26-12-2018 ರಂದು ರಾತ್ರಿ ಸುಮಾರು 12:00 ಗಂಟೆಗೆ ತನ್ನ ಅಕ್ಕ ಅನುಷಾ ರವರನ್ನು ತನ್ನ ಬೈಕ್ ನಂ: KA-21,L-7262, ನಲ್ಲಿ  ಕುಳ್ಳಿರಿಸಿಕೊಂಡು ಸಂಯುಕ್ತ ಕ್ರಿಸ್ಮಸ್ ಆಚರಣೆಯನ್ನು ಮುಗಿಸಿಕೊಂಡು ಕಡಬದಿಂದ ಮನೆ ಕಡೆಗೆ ಹೋಗುತ್ತಿದ್ದರು.

ಆ  ಸಮಯದಲ್ಲಿ  ಪುತ್ತೂರು ತಾಲೂಕು ಕಡಬ ಗ್ರಾಮದ ಮುಳಿಮಜಲು ಎಂಬಲ್ಲಿಗೆ ತಲುಪಿದಾಗ, ಕುಟ್ರುಪ್ಪಾಡಿ ಗ್ರಾಮದ ಬಿನು ಎಂಬವರು ತನ್ನ ಬೈಕ್ ನಂ :KA-02,Y-5918 ನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ KA-21,L-7262, ನೇ ಸವಾರರು ನೆಲಕ್ಕೆ ಬಿದ್ದ ಪರಿಣಾಮ ಅಜೀಶ್ ಜಾನ್ಸನ್ ಹಾಗೂ ಅನುಷಾರವರಿಗೆ ತಲೆಗೆ ಮತ್ತು ಕಾಲಿಗೆ ಗಾಯವಾಗಿರುತ್ತದೆ. ಆದುದ್ದರಿಂದ ಅಜೀಶ್ ಜಾನ್ಸನ್ ಹಾಗೂ ಅನುಷಾ ರವರನ್ನು ಚಿಕಿತ್ಸೆಯ ಬಗ್ಗೆ  ಫಾದರ್ ಮುಲ್ಲರ್ ಕಂಕನಾಡಿ ಅಸ್ಬತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 214/2018 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Also Read  ಮರ್ದಾಳ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ► ಇಂಟರ್ಲಾಕ್ ಕಾಮಗಾರಿಗೆ ಗುದ್ದಲಿಪೂಜೆ

 

 

error: Content is protected !!
Scroll to Top