ಬಂಟ್ವಾಳ: ನಾಟಕ ನೋಡಲು ಹೋಗಿ ಬಂದವನಿಗೆ ಕಾದಿತ್ತು ಶಾಕಿಂಗ್ ನ್ಯೂಸ್ !

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಡಿ.29.ಬಂಟ್ವಾಳ ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮ,ಮುಂಡಡ್ಕ ಮನೆ ಕರುಣಕರ ಶೆಟ್ಟಿ ಪ್ರಾಯ  (50)   ಮುಂಡಡ್ಕ ಮನೆ, ಎಂಬವರು ದಿನಾಂಕ 25-12-2018 ರಂದು ಸಮಯ  ರಾತ್ರಿ 11.30 ಗಂಟೆಗೆ ತಮ್ಮ ಬಾಬ್ತು  ಬೈಕ್ KA 19 EY 7945 ನೇದನ್ನು ಕಳ್ಳಿಗೆ ಗ್ರಾಮದ ತೊಡಂಬಿಲ ಚರ್ಚ್ ಬಳಿ ನಿಲ್ಲಿಸಿ, ಚರ್ಚ್ ವಠಾರದಲ್ಲಿ ನಡೆಯುತ್ತಿದ್ದ ನಾಟಕವನ್ನು ನೋಡಲು ಹೋಗಿದ್ದು, ನಂತರ ನಾಟಕ ಮುಗಿದ ನಂತರ ಸದ್ರಿ ಬೈಕನ್ನು ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ಸದ್ರಿ ಮೊಟರ್ ಸೈಕಲ್ ನಾಪತ್ತೆ ಆಗಿತ್ತು.

Also Read  ಸೋಲಾರ್ ಕಾರ್ ► ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಹೊಸ ಆವಿಷ್ಕಾರ..!!

 

ನಂತರ ಎಲ್ಲಾ ಕಡೆ ಹುಡುಕಾಡಿದಾಗ, ಎಲ್ಲಿಯೂ ಪತ್ತೆಯಾಗದೇ ಇದ್ದು, ಸದ್ರಿ  ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬೈಕ್ ನ ಅಂದಾಜು ಮೌಲ್ಯ ಸುಮಾರು 49,000/- ರೂ ಆಗಬಹುದಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ 437/2018 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

error: Content is protected !!
Scroll to Top