ಕಡಬ: ಹತ್ತನೇ ತರಗತಿಯ ವಿದ್ಯಾರ್ಥಿನಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಡಿ.28. ಶಾಲೆಗೆಂದು ಮನೆಯಿಂದ ತೆರಳಿದ ವಿದ್ಯಾರ್ಥಿನಿಯೋರ್ವಳು ಅತ್ತ ಶಾಲೆಗೂ ತೆರಳದೆ, ಇತ್ತ ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ಗುರುವಾರದಂದು ನಡೆದಿದೆ.

ಆಲಂಕಾರು ಗ್ರಾಮದ ನಡುಗುಡ್ಡೆ ನಿವಾಸಿ ರಾಘವೇಂದ್ರ ಎಂಬವರ ಪುತ್ರಿ, ರಾಮಕುಂಜದ ಖಾಸಗಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ರಿತೀಕಾ(16) ನಾಪತ್ತೆಯಾಗಿರುವಾಕೆ. ಈಕೆ ಗುರುವಾರದಂದು ಮುಂಜಾನೆ ಎಂದಿನಂತೆ ಶಾಲೆಗೆಂದು ಮನೆಯಿಂದ ತೆರಳಿದ್ದು, ಶಾಲೆಗೆ ಹೋಗದೆ ಪರೀಕ್ಷೆಗೆ ಗೈರು ಹಾಜರಾದ ಬಗ್ಗೆ ಅಧ್ಯಾಪಕರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಬಂಧಿಕರಲ್ಲಿ ಹಾಗೂ ನೆರೆಕರೆಯವರಲ್ಲಿ ವಿಚಾರಿಸಿ ಪತ್ತೆಯಾಗದ ಹಿನ್ನೆಲೆಯಲ್ಲಿ ರಿತೀಕಾಳ ತಂದೆ ರಾಘವೇಂದ್ರರವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಉಳ್ಳಾಲ: ಕಾರು ಮತ್ತು ಬೈಕ್ ನಡುವೆ ಅಪಘಾತ ➤ ಸವಾರರಿಬ್ಬರಿಗೆ ಗಾಯ

error: Content is protected !!
Scroll to Top