(ನ್ಯೂಸ್ ಕಡಬ) newskadaba.com. ಕಡಬ,ಡಿ.28. ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಕುಟ್ರುಪಾಡಿ ಗ್ರಾಮದ ವಾಳ್ಯ ಕಿ.ಪ್ರಾ.ಶಾಲೆಯಲ್ಲಿ ಒಂದು ವಾರಗಳ ಕಾಲ ನಡೆಯುವ ಎನ್ನೆಸೆಸ್ಸ್ ಶಿಬಿರದ ಉದ್ಘಾಟನೆ ನಡೆಯಿತು.ಕುಟ್ರುಪಾಡಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ಕರುಣಾಕರ ಗೋಗಟೆ ಉದ್ಘಾಟಿಸಿ ಮಾತನಾಡಿ, ಶಿಬಿರ ವಿದ್ಯಾರ್ಥಿಗಳಿಗೆ ಸಮರ್ಪಣಾ ಭಾವವನ್ನು ತಿಳಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶಿಬಿರದಲ್ಲಿನ ಶಿಸ್ತು ಸಂಯವನ್ನು ತನ್ನ ಜೀವನದ ಉದ್ದಕ್ಕೂ ಅಳವಡಿಸಿಕೊಂಡು ಉತ್ತಮ ನಾಗರೀಕನಾಗಿ ಬಾಳಬೇಕು ಎಂದರು.
ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಇಚ್ಛಾಶಕ್ತಿಯೊಂದಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಏನ್ನನೂ ಸಾಧಿಸಬಹುದು ಎಂಬುದಕ್ಕೆ ಈ ವಾಳ್ಯದ ಪುಟ್ಟ ಶಾಲೆ ಸಾಕ್ಷಿಯಾಗಿದೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಇಲ್ಲಿನ ಪರಿಸರದವರ ಸಹಕಾರ ಬಹಳವಾಗಿದೆ. ಈ ಭಾಗದ ಎಲ್ಲರೂ ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸಬೇಕು, ಈ ಶಾಲೆಗೆ ತಾನು ಕೂಡಾ ತನ್ನಿಂದಾದ ಸಹಕಾರ ನೀಡುವುದಾಗಿ ಹೇಳಿದರು.ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯದ ನಿರ್ದೇಶಕರಾದ ವೇದವ್ಯಾಸ ರಾಮಕುಂಜ ಅದ್ಯಕ್ಷತೆ ವಹಿಸಿದ್ದರು.
ಕುಟ್ರುಪ್ಪಾಡಿ ಗ್ರ್ರಾ.ಪಂ.ಅಧ್ಯಕ್ಷೆ ವಿದ್ಯಾ ಗೋಗಟೆ , ತಾ.ಪಂ.ಸದಸ್ಯ ಗಣೇಶ್ ಕೈಕುರೆ ಪತ್ರಕರ್ತ ಖಾದರ್ ಸಾಹೇಬ್ , ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಂಕೀರ್ತ್ ಹೆಬ್ಬಾರ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸುಂದರ, ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ, ಕಡಬ ಕದಂಬ ಜೆಸಿಐ ಕಾರ್ಯದರ್ಶಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಶಿನಾಥ್ ಗೋಗಟೆ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ಶಿಶಾಂತ್, ನಾಯಕಿ ಮಾನಸ ಶುಭಹಾರೈಸಿದರು. ಶಿಬಿರಾಧಿಕಾರಿ ಗುರುಕಿರಣ್ ಶೆಟ್ಟಿ ಸ್ವಾಗತಿಸಿ, ಶಿಬಿರಾರ್ಥಿ ನಿವೇದಿತ ವಂದಿಸಿದರು. ಶಿಬಿರಾರ್ಥಿ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.