(ನ್ಯೂಸ್ ಕಡಬ) newskadaba.com. ಕಡಬ,ಡಿ.28.ಕುಟ್ರುಪಾಡಿಉ.ಹಿ.ಪ್ರಾ ಶಾಲಾ ವಾರ್ಷಿಕೋತ್ಸವ ಕ್ರೀಡೋತ್ಸವ ಶಾಲಾ ಕ್ರೀಡಾಂಗಣದಲ್ಲಿನಡೆಯಿತು.ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಕುಟ್ರುಪಾಡಿ ಗ್ರಾ.ಪಂ.ಅದ್ಯಕ್ಷೆ ವಿದ್ಯಾ ಗೋಗಟೆ, ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಚೆಲ್ಲುವ ಮೂಲಕ ಪ್ರತಿಯೊಬ್ಬರ ಪ್ರತಿಭೆಯನ್ನು ಹೊರ ಹೊಮ್ಮಲು ಶಿಕ್ಷಣ ಮಹತ್ವವಾಗಿದ್ದು, ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ದೈಹಿಕ ಸಾಮಥ್ರ್ಯತೆಯನ್ನು ವೃದ್ಧಿಸಿಕೊಳ್ಳುವುದರೊಂದಿಗೆ ತನ್ನ ಕ್ರೀಡಾ ಪ್ರತಿಭೆಯನ್ನು ಕೂಡಾ ಹೊರಗೆಡಹಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕ್ರೀಡಾ ಮಾರ್ಗದರ್ಶಕ ಕುಟ್ರುಪಾಡಿ ಸಿ.ಎ.ಬ್ಯಾಂಕಿನ ನಿರ್ದೇಶಕ ಶಶಾಂಕ್ ಗೋಖಲೆ ಮಾತನಾಡಿ, ಹಿಂದೆ ನಮ್ಮ ಹಿರಿಯ ವಿದ್ಯಾರ್ಥಿ ಸಂಘದ ಅವಧಿಯಲ್ಲಿ ನಾವು 40 ಜನ ಸಂಘಟಕರು ಸೇರಿಕೊಂಡು ನಡೆಸುತ್ತಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸುತ್ತಿದ್ದು, ಪ್ರತಿಯೊಂದು ಕಾರ್ಯಕ್ರಮ ಜಾತ್ರೆಯಂತೆ ನಡೆಯುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಬೇರೆ ಬೇರೆ ಕಾರ್ಯ ನಿಮಿತ್ತ ಯಾರಿಗೂ ಸಮಯದ ಅಭಾವ ಇರುತ್ತದೆ. ಆದರೂ ನಮ್ಮ ಶಾಲೆ ಎಂಬ ಅಭಿಮಾನವೊಂದಿದ್ದರೆ ಎಲ್ಲಾ ಕಾರ್ಯಗಳ ಯಶಸ್ಸಿಗೆ ನಾವು ಶ್ರಮಿಸಬೇಕಾಗಿದೆ ಎಂದರು.
ಕುಟ್ರುಪಾಡಿ ಗ್ರಾ.ಪಂ.ಉಪಾಧ್ಯಕ್ಷ ಆನಂದ ಪೂಜಾರಿ, ಗ್ರಾ.ಪಂ.ಸದಸ್ಯ ಲಿಂಗಪ್ಪ ಗೌಡ, ಗ್ರಾ.ಪಂ.ಮಾಜಿ ಸದಸ್ಯ ಕ್ಷೇವಿಯರ್ ಬೇಬಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೀಥೇಶ್ ಅಮೈ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ವೇಂಕಟೇಶ್ ಆರಿಗ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಕೆ. ಸ್ವಾಗತಿಸಿ, ನಿರಂಜನ್ ಗೋಖಲೆ ವಂದಿಸಿದರು. ನವೀನ್ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.