ಕೋಡಿಂಬಾಳ: ಮೂರಾಜೆ ಅಡೀಲು ಪರಿಶಿಷ್ಟ ಕಾಲೋನಿ ರಸ್ತೆ ಸಂಪರ್ಕಕ್ಕೆ ಮನವಿ

(ನ್ಯೂಸ್ ಕಡಬ) newskadaba.com.ಕಡಬ, ಡಿ.28. ಕೋಡಿಂಬಾಳ ಗ್ರಾಮದ ಮೂರಾಜೆ ಅಡೀಲು ದಲಿತ ಕಾಲೋನಿಗೆ ಸಂಪರ್ಕ ರಸ್ತೆ ನಿರ್ಮಿಸುವಂತೆ ಅಡೀಲು ಕಾಲೋನಿ ನಿವಾಸಿಗಳು ಪುತ್ತೂರು ಸಹಾಯಕ ಕಮಿಷ್‍ನರ್ , ಕಡಬ ತಹಶೀಲ್ದಾರ್ ಹಾಗೂ ಕಡಬ ಗ್ರಾ.ಪಂ ಗೆ ಮನವಿ ನೀಡಿ ಶೀಘ್ರ ರಸ್ತೆ ಮಾಡಿಸುವಂತೆ ಆಗ್ರಹಿಸಿದ ಘಟನೆ ನಡೆದಿದೆ. ದಲಿತ ಒಕ್ಕೂಟಗಳ ಕಡಬ ತಾಲೂಕು ಅಧ್ಯಕ್ಷ ವಸಂತ ಕುಬುಲಾಡಿಯವರ ನೇತೃತ್ವದಲ್ಲಿ ಅಡೀಲು ದಲಿತ ನಿವಾಸಿಗಳು ಕಡಬ ತಹಶೀಲ್ದಾರರಿಗೆ ಹಾಗೂ ಕಡಬ ಗ್ರಾ.ಪಂ ಪಿಡಿಒ ರವರಿಗೆ ಮನವಿ ಸಲ್ಲಿಸಿ ಹಲವಾರು ವರ್ಷಗಳ ಬೇಡಿಕೆಯಾಗಿರುವ ಮೂರಾಜೆ ಅಡೀಲು ದಲಿತ ಕಾಲೋನಿಗೆ ಕಡಬ – ಕುತ್ಯಾಡಿ ಸಡಕ್ ರಸ್ತೆಯಿಂದ ಸಂಪರ್ಕ ರಸ್ತೆ ನಿರ್ಮಿಸಿ ಕೊಡುವಂತೆ ಕೇಳಿಕೊಂಡರು.

ಮನವಿ ಸ್ವೀಕರಿಸಿದ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಡಬ ಗ್ರಾ.ಪಂ ನಲ್ಲಿ ಮನವಿ ಪಡೆದುಕೊಂಡಿರುವ ಪಿಡಿಒ ಚೆನ್ನಪ್ಪರವರು ತಮ್ಮ ಅರ್ಜಿಯನ್ನು ಪರಿಗಣಿಸಿ ಆಡಳಿತ ಮಂಡಳಿ ಗಮನಕ್ಕೆ ತರಲಾಗುವುದು ರಸ್ತೆ ಯಾರದೇ ಪಟ್ಟ ಸ್ಥಳದಲ್ಲಿದ್ದರೆ ಕಂದಾಯ ಇಲಾಖಾ ಮುಖಾಂತರವೇ ಪರಿಹರಿಸಿಕೊಳ್ಳಬೇಕೆಂದು ತಿಳಿಸಿದ ಅವರು ಜಾಗವನ್ನು ಪರಿಶೀಲಿಸಲಾಗುವುದೆಂದರು. ಸ್ತ್ರೀ ಶಕ್ತಿ ಮಹಿಳಾ ಸೊಸೈಟಿ ಕಾರ್ಯದರ್ಶಿ ಜಯಶ್ರೀ, ಅಡೀಲು ನಿವಾಸಿಗಳಾದ ಕಮಲ, ರಿತೇಶ್ ,ತನಿಯ, ಪೊಡಿಯಾ, ವಸಂತ, ಆನಂದ, ಕವಿತಾ, ಗುರುವ, ಸೀತಾ, ಅಶ್ವಿನಿ, ಕುಂಡ , ಸುನಿತಾ, ಶೃತಿ, ಚೋಮ, ಕುಂಞಪ್ಪ, ಮೋನಪ್ಪ, ಶೀನ, ಸುಂದರ, ಸುರೇಶ, ಅಂಗಾರ, ಅಣಿಯಾರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Also Read  ವೃತ್ತಿರಂಗಭೂಮಿಗಾಗಿ ಶಿಷ್ಯವೇತನ ➤ ಮೌಖಿಕ ಸಂದರ್ಶನ

error: Content is protected !!
Scroll to Top