ಕಡಬ ಸಿಎ ಬ್ಯಾಂಕ್‍ನ ಕೊಣಾಜೆ ಶಾಖೆಗೆ ಮಠಂದೂರು ಭೇಟಿ

(ನ್ಯೂಸ್ ಕಡಬ) newskadaba.com.ಕಡಬ, ಡಿ.28. ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕೊಣಾಜೆ ಶಾಖಾ ಕಛೇರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಗುರುವಾರ ಭೇಟಿ ನೀಡಿದರು.ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಶಾಸಕರು ಕೊಣಾಜೆ ಶಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಡಳಿತ ಮಂಡಳಿ ಹಾಗೂ ಸಿಬಂದಿವರ್ಗ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷ ಎ.ಬಿ.ಮನೋಹರ ರೈ, ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಘುಚಂದ್ರ ಗೌಡ ಕೆ, ಸಂಘದ ಮಾಜಿ ನಿರ್ದೆಶಕ ಶಿವಪ್ಪ ಗೌಡ, ಕೊಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶೋಧರ ಗೌಡ, ಸದಸ್ಯರಾದ ಆನಂದ ಗೌಡ ಬಿ.ಎಸ್, ಪೊಡಿಯ ಗೌಡ, ಪ್ರಮುಖರಾದ ವಾಸುದೇವ ಭಟ್ ಕಡ್ಯ, ಸುಂದರ ಗೌಡ, ನಿವೃತ್ತ ಸೈನಿಕ ಗಣೇಶ್, ರಾಮಣ್ಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಕೊಣಾಜೆ ಶಾಖಾ ವ್ಯವಸ್ಥಾಪಕ ಆನಂದ ಗೌಡ ಕೋಕ್ಯಾಡಿ ಸ್ವಾಗತಿಸಿದರು. ಸಿಬ್ಬಂದಿ ದೀಕ್ಷಿತಾ ವಂದಿಸಿದರು.

Also Read  ಕರಾವಳಿ ಉತ್ಸವದಲ್ಲಿ  ಇಂದಿನ ಕಾರ್ಯಕ್ರಮಗಳು

error: Content is protected !!