ಕಡಬದಲ್ಲಿ ದೀಪ ಜ್ಯೋತಿ ಕಾರ್ಯಕ್ರಮ-ಮೆರವಣಿಗೆ

(ನ್ಯೂಸ್ ಕಡಬ) newskadaba.com.ಕಡಬ , ಡಿ. 28.  ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರ ಕುರಿತು ಕೇರಳದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಕಡಬದಲ್ಲಿ ಮಹಿಳೆಯರಿಂದ ದೀಪ ಜ್ಯೋತಿ ಕಾರ್ಯಕ್ರಮ ಡಿ.26ರ ಸಂಜೆ ನಡೆಯಿತು.


ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಹಣತೆಗಳನ್ನು ಉರಿಸಿ ಕಡಬ ಪೇಟೆಯಲ್ಲಿ ಅಯ್ಯಪ್ಪ ಭಕ್ತರು ಹಾಗೂ ಮಹಿಳೆಯರು ಮೆರವಣಿಗೆ ನಡೆಸಿದರು. ಬಳಿಕ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಕಡಬ ವಿಶ್ವ ಹಿಂದೂ ಪರಿಷದ್‍ನ ಗೌರವಾಧ್ಯಕ್ಷ ಎ. ಜನಾರ್ದನ ರಾವ್ ಮಾತನಾಡಿದರು. ಈ ಸಂದರ್ಭದಲ್ಲಿ ಕಡಬ ಸರಸ್ವತಿ ಶಾಲೆಯ ಸಂಚಾಲಕ ವೆಂಕಟ್ರಮಣ ರಾವ್, ವಿ.ಹಿಂ.ಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಗೌಡ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಪ್ರಮುಖರಾದ ರವಿರಾಜ ಶೆಟ್ಟಿ, ಪ್ರೀತ ಮೊದಲಾದವರು ಉಪಸ್ಥಿತರಿದ್ದರು. ಆರ್.ಎಸ್.ಎಸ್. ಮುಖಂಡ ರಾಮಚಂದ್ರ ಶಾಂತಿ ಮಂತ್ರ ಹೇಳಿದರು.

Also Read  ಐಪಿಎಲ್ ನಿಂದ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್

error: Content is protected !!
Scroll to Top