ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

(ನ್ಯೂಸ್ ಕಡಬ) newskadaba.com. ಮಂಗಳೂರು, ಡಿ. 26. ದಕ್ಷಿಣ ಕನ್ನಡ ಜಲ್ಲಾ ಗೃಹರಕ್ಷಕದಳದ 14 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ ದಿನಾಂಕ: 23-12-2018ರಂದು ಜರುಗಿತು. ಇದು 2018ನೇ ಇಸವಿಯ 04ನೇ ಸಭೆಯಾಗಿದ್ದು ಗೃಹರಕ್ಷದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ 75 ಮಂದಿ ಗೃಹರಕ್ಷಕರನ್ನು ಆದಷ್ಟು ಬೇಗ ಭರ್ತಿ ಮಾಡಲು ಘಟಕಾಧಿಕಾಧಿಕಾರಿಗಳಿಗೆ ಆದೇಶ ನೀಡಲಾಯಿತು.

ಪ್ರಸಕ್ತ ಮಂಜೂರಾತಿಯಾದ 1000 ಗೃಹರಕ್ಷಕರಲ್ಲಿ 925 ಮಂದಿ ಗೃಹರಕ್ಷಕರು ನೊಂದಾವಣೆ ಮಾಡಿರುತ್ತಾರೆ. ಪ್ರಸ್ತುತ ನೊಂದಾವಣೆಯಾಗಿರುವ ಗೃಹರಕ್ಷಕರಲ್ಲಿ ನಿಷ್ಕ್ರೀಯರಾಗಿರುವ ಮತ್ತು ವಾರದ ಕವಾಯತು ಹಾಗೂ ಬಂದೋಬಸ್ತು ಕರ್ತವ್ಯಗಳಿಗೆ ಗೈರು ಹಾಜರಾಗುವ ಗೃಹರಕ್ಷಕರಿಗೆ ನೋಟಿಸು ನೀಡಿ ಸಮಾಲೋಪನ ಗೊಳಿಸಲು ಆದೇಶ ನೀಡಲಾಯಿತು. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಈ ಕ್ರಮ ಅನಿವಾರ್ಯ ಎಂದು ಸಮಾದೇಷ್ಟರು ನುಡಿದರು.ಇದೇ ಸಂದರ್ಭದಲ್ಲಿ ಎಲ್ಲಾ ಗೃಹರಕ್ಷಕರನ್ನು ನಿಯಾಮನುಸಾರವಾಗಿ ಪ್ರತಿ 03 ತಿಂಗಳಿಗೊಮ್ಮೆ ರೊಟೇಷನ್ ಪದ್ದತಿಯಲ್ಲಿ ಬೇರೆ ಬೇರೆ ಇಲಾಖೆಗಳಿಗೆ ನೇಮಕ ಮಾಡಬೇಕು ಎಂದು ಘಟಕಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶ ನೀಡಲಾಯಿತು.

Also Read  ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸುಳ್ಯದ ಮಹಿಳೆಗೆ ಲಕ್ಷಾಂತರ ರೂ. ವಂಚನೆ ➤ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲು

ಉಪಾಸಮಾದೇಷ್ಠರಾದ ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಛೇರಿಯ ಅಧೀಕ್ಷಕರಾದ ಶ್ರೀ ರತ್ನಾಕರು ಮತ್ತು ಪ್ರಥಮ ಧರ್ಜೆ ಸಹಾಯಕರಾದ ಅನಿತಾ ರವರು ಉಪಸ್ಥಿತರಿದ್ದರು. ವಿವಿಧ ಘಟಕಗಳ ಘಟಕಾಧಿಕಾರಿ/ ಪ್ರಭಾರ ಘಟಕಾಧಿಕಾರಿಗಳಾದ ಶ್ರೀನಿವಾಸ ಆಚಾರ್ಯ(ಬಂಟ್ವಾಳ ಘಟಕ) ,ದಿನೇಶ್ (ಉಪ್ಪಿನಂಗಡಿ ಘಟಕ) ,ಹರೀಶ್ ಆಚಾರ್ಯ (ಪಣಂಬೂರು ಘಟಕ), ರಮೇಶ್.( ಸುರತ್ಕಲ್ ಘಟಕ) ಸಂಜೀವ,(ವಿಟ್ಲ ಘಟಕ) ಅಬ್ದುಲ್ ಗಫೂರ್ (ಸಾರ್ಜೇಂಟ್ ಸುಳ್ಯ ಘಟಕ), ಪಿ.ವಸಂತ ಕುಮಾರ್ (ಸುಬ್ರಹ್ಮಣ್ಯ ಘಟಕ) ಉಪಸ್ಥಿತರಿದ್ದರು.

Also Read  ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ ➤ ಐವರು ಆರೋಪಿಗಳಿಗೆ ಪೊಲೀಸ್‌ ಕಸ್ಟಡಿ

error: Content is protected !!
Scroll to Top