ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ಕಳ್ಳತನ ► ಒಬ್ಬಂಟಿಯಾಗಿ ತೆರಳುವಾಗ ಎಚ್ಚರಿಕೆ

(ನ್ಯೂಸ್ ಕಡಬ) newskadaba.com. ಮಂಗಳೂರು, ಡಿ. 26.  ಸಿಐಡಿ ಪೊಲೀಸರೆಂದು ನಂಬಿಸಿ ಗಮನ ಬೇರೆಡೆ ಸೆಳೆದು ಸರಗಳ್ಳತನ ಮಾಡುವ ತಂಡವೊಂದು ಕರಾವಳಿಗೆ ಎಂಟ್ರಿ ಕೊಟ್ಟಿದ್ದು ಇದರ ಬಗ್ಗೆ ಜನ ಜಾಗೃತರಾಗಬೇಕು ಎಂದು ಡಿಸಿಪಿ ಉಮಾಪ್ರಶಾಂತ್ ಜಿಲ್ಲಾ ನಾಗರೀಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಡಿಸಿಪಿ ಉಮಾ ಪ್ರಶಾಂತ್, ಉಡುಪಿ ಜಿಲ್ಲಾ ಪೊಲೀಸರು ಈ ಬಗ್ಗೆ ಅಲರ್ಟ್ ಮಾಹಿತಿ ನೀಡಿದ್ದಾರೆ.

ಬಂದರು ಠಾಣಾ ವ್ಯಾಪ್ತಿಯಲ್ಲಿ ದಾರಿಹೋಕ ವೃದ್ದರೊಬ್ಬರ ಬಳಿ ಬಂದ ಕಳ್ಳರು ತಾವು ಪೊಲೀಸರೆಂದು ವಂಚಿಸಿ ಚಿನ್ನಾಭರಣ ದೋಚಿಸಿದ್ದಾರೆ. ಚಿನ್ನಾಭರಣ ಕಳೆದುಕೊಂಡವರನ್ನು ಅಳಕೆ ನಿವಾಸಿ ಭಗವಾನ್ ದಾಸ್ (72) ಎಂದು ಗುರುತಿಸಲಾಗಿದೆ. ಕಪ್ಪು ಬಣ್ಣದ ಬೈಕ್ ನಲ್ಲಿ ಬಂದ ಇಬ್ಬರು ನಾವು ಸಿಐಡಿ ಪೊಲೀಸರು, ಮುಂದೆ ಸರಗಳ್ಳರಿರುವ ಬಗ್ಗೆ ಮಾಹಿತಿ ದೊರಕಿದೆ ಎಂದು ಬಣ್ಣದ ಮಾತುಗಳನ್ನಾಡಿದ್ದಾರೆ. ಕೊರಳಿದ್ದ ಚಿನ್ನದ ಸರ ಹಾಗೂ ಎರಡು ಉಂಗುರವನ್ನು ಕಳಚುವಂತೆ ತಿಳಿಸಿ ಸಹಾಯ ಮಾಡುವ ನೆಪದಲ್ಲಿ ಕಳ್ಳರು ಕವರೊಂದಕ್ಕೆ ಹಾಕಿ ಬೇಗ ಮನೆಗೆ ಹೋಗಿ ಎಂದು ತಿಳಿದ್ದಾರೆ. ಆದರೆ ಭಗವಾನ್ ದಾಸ್ ಮನೆಗೆ ಬಂದು ಕವರ್ ಬಿಚ್ಚಿನೋಡಿದಾಗ ಚಿನ್ನಾಭರಣ ಮಾಯವಾಗಿತ್ತು. ಬಳಿಕ ತಾವು ಮೋಸಹೋಗಿದ್ದು ಅರಿವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Also Read  3 ತಿಂಗಳ ಗರ್ಭಿಣಿ ಕೆರೆಗೆ ಹಾರಿ ಆತ್ಮಹತ್ಯೆ

ಈಗಾಗಲೇ ಉಡುಪಿಯಲ್ಲಿ ಎರಡು ಮೂರು ಪ್ರಕರಣ ದಾಖಲಾಗಿದೆ. ಪೊಲೀಸರು ಗಸ್ತಿನಲ್ಲಿರುವಂತೆ ಮಂಗಳವಾರ ಬಂದರೂ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಕಪ್ಪು ಬಣ್ಣ ದ ಬೈಕ್ ನಲ್ಲಿ ಹಿಂದಿ ಮಾತನಾಡುವ ಇಬ್ಬರು ಕಳ್ಳರು ವೃದ್ದರೊಬ್ಬರ ಅಭರಣ ದೋಚಿದ್ದಾರೆ. ಈ ಹಿನ್ನಲೆಯಲ್ಲಿ ಮಹಿಳೆಯರು ಒಬ್ಬಂಟಿಯಾಗಿ ತೆರಳುವ ಸಂದರ್ಭ ಚಿನ್ನಾಭರಣ ಧರಿಸಬಾರದು, ಅಲ್ಲದೆ ಆಗಂತುಕರು ಯಾರಾದರೂ ಇದೇ ರೀತಿ ಚಿನ್ನಾಭರಣ ತೆಗೆಯಲು ಒತ್ತಾಯಿಸಿದಲ್ಲಿ ಯಾವುದೇ ಕಾರಣಕ್ಕೂ ಚಿನ್ನಾಭರಣ ತೆಗೆಯಕೂಡದು ಹಾಗೂ ತಕ್ಷಣ ಪಕ್ಕದಲ್ಲಿರುವ ಪರಿಚಿತರಿಗೆ ಮಾಹಿತಿ ನೀಡಬೇಕು ಇಲ್ಲವೇ ಕೂಗಿಕೊಳ್ಳಬೇಕು ಎಂದು ಅವರು ಸಾರ್ವಜನಿಕರಲ್ಲಿ ಅವರು ವಿನಂತಿಸಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ೨ ಪ್ರಕರಣ ದಾಖಲಾಗಿದ್ದು, ದಾರಿಹೋಕರನ್ನು ಕಳ್ಳರಿದ್ದಾರೆ ಎಂದು ನಂಬಿಸಿ, ಅಭರಣ ತೆಗೆಯುವಂತೆ ಮಾಡಿ ಸಹಾಯ ಮಾಡುವ ನೆಪದಲ್ಲಿ ಕರವಸ್ತ್ರದಲ್ಲಿ ಕಟ್ಟಿ ನೀಡಿದ್ದಾರೆ. ಆದರೆ ಬಳಿಕ ಕರವಸ್ತ್ರ ಬಿಚ್ಚಿದಾಗಲೇ ಮೋಸ ಹೋಗಿದ್ದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ಉಡುಪಿ ಪೊಲೀಸ್ ಇಲಾಖೆ ದ.ಕ ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಿದೆ.

Also Read  30 ಗಂಟೆಗಳ ಕಾಲ ಸಮುದ್ರದಲ್ಲಿ ಈಜಾಡಿ ಸಾವನ್ನು ಗೆದ್ದುಬಂದ ಮೀನುಗಾರ..! ➤ ಮಧ್ಯರಾತ್ರಿ ದೋಣಿಯಿಂದ ಹೊರಬಿದ್ದ ಮಂಗಳೂರಿನ ವ್ಯಕ್ತಿ

 

error: Content is protected !!
Scroll to Top