ಕುಕ್ಕೆಗೆ ಹರಿದು ಬರುತ್ತಿದೆ ಭಕ್ತ ಜನ ಸಾಗರ ► ಅನ್ನದಾನ, ಸರ್ಪಸಂಸ್ಕಾರ ದಾಖಲೆ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ,ಡಿ. 26. ಕ್ರಿಸ್‌ಮಸ್ ರಜೆಯ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರವೂ ಭಕ್ತಸಾಗರ ಮುಂದುವರಿದಿದ್ದು, ಕ್ಷೇತ್ರದಲ್ಲಿ ನಾಲ್ಕು ದಿನಗಳ ಅನ್ನದಾನ ದಾಖಲೆ ಸೃಷ್ಟಿಸಿದೆ. ಸರ್ಪಸಂಸ್ಕಾರ ಸಹಿತ ಪ್ರಮುಖ ಸೇವೆಗಳೂ ಅಧಿಕ ದಾಖಲಾಗಿವೆ.ಶನಿವಾರ 35 ಸಾವಿರ, ಭಾನುವಾರು 40, ಸೋಮವಾರ 45, ಮಂಗಳವಾರ 60 ಸಾವಿರ ಸಹಿತ ನಾಲ್ಕು ದಿನಗಳಲ್ಲಿ 1.80 ಲಕ್ಷಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಈ ನಾಲ್ಕು ದಿನಗಳಲ್ಲಿ ಕ್ರಮವಾಗಿ ಶನಿವಾರ 31, ಭಾನುವಾರ 30, ಸೋಮವಾರ 27, ಮಂಗಳವಾರ 55 ಕ್ವಿಂಟಾಲ್ ಅಕ್ಕಿಯ ಭೋಜನ ಪ್ರಸಾದ ವಿತರಿಸಿರುವುದು ದಾಖಲೆಯಾಗಿದೆ. ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿ, ಕೆಳಮಹಡಿ, ಗಣಪತಿ ದೇವಸ್ಥಾನ, ಶೃಂಗೇರಿ ಮಠ, ಆದಿಸುಬ್ರಹ್ಮಣ್ಯ ಮೊದಲಾದೆಡೆ ಭಕ್ತರಿಗೆ ಭೋಜನ ಪ್ರಸಾದ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

 ನಾಲ್ಕು ದಿನಗಳಲ್ಲಿ ಪ್ರತಿದಿನ 180ರಂತೆ 720 ಸರ್ಪ ಸಂಸ್ಕಾರ ಸೇವೆ ನಡೆದಿದೆ. ಶನಿವಾರ 279, ಭಾನುವಾರ 954, ಸೋಮವಾರ 712, ಮಂಗಳವಾರ 1046 ಸಹಿತ ಒಟ್ಟು 2991 ಆಶ್ಲೇಷಬಲಿ ಸೇವೆ, ಶನಿವಾರ 70, ಭಾನುವಾರ 157, ಸೋಮವಾರ 164, ಮಂಗಳವಾರ 195 ಸಹಿತ 586 ನಾಗಪ್ರತಿಷ್ಠೆ, ಶನಿವಾರ 267, ಭಾನುವಾರ 268, ಸೋಮವಾರ 323, ಮಂಗಳವಾರ 308 ಸೇರಿ 586 ಶೇಷ ಸೇವೆ, ಶನಿವಾರ- 120, ಭಾನುವಾರ-137, ಸೋಮವಾರ-128, ಮಂಗಳವಾರ-130 ಸಹಿತ ನಾಲ್ಕು ದಿನಗಳಲ್ಲಿ ಒಟ್ಟು 515 ತುಲಾಭಾರ ಸೇವೆ ನಡೆದಿದೆ.‘ಪರಿಸ್ಥಿತಿಯನ್ನು ಮೊದಲೇ ಮನಗಂಡು ಭಕ್ತರ ಅನುಕೂಲತೆಗೆ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆ ಮಾಡಿತ್ತು’ ಎಂದು ಅಧ್ಯಕ್ಷ ನಿತ್ಯಾನಂದ ಮುಂಡೋಡಿತಿಳಿಸಿದ್ದಾರೆ.ಅಧಿಕ ಭಕ್ತರು, ಸೋಮವಾರ ಅದಕ್ಕಿಂತಲೂ ಹೆಚ್ಚಿನ ಭಕ್ತರು ಭೇಟಿ ನೀಡಿದ್ದಾರೆ. ಪ್ರತಿದಿನ ಸರಾಸರಿ 40 ಸಾವಿರದಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಕ್ಷೇತ್ರದಲ್ಲಿ 35 ಸಾವಿರದಷ್ಟು ಮಂದಿಗೆ ವಸತಿ ವ್ಯವಸ್ಥೆಯಿದ್ದು, ಭರ್ತಿಯಾಗಿತ್ತು.

error: Content is protected !!

Join the Group

Join WhatsApp Group