ಬೆಥನಿ ಸಮೂಹ ಶಿಕ್ಷಣ ಸಂಸ್ಥೆ: ಕ್ರಿಸ್ಮಸ್‌ ಆಚರಣೆ, ಹಬ್ಬಗಳೆಂದರೆ ಬರೇ ಆಡಂಬರಗಳೇ ಆಗದೆ ಪ್ರೀತಿ ಸಂತೋಷಗಳನ್ನುಹಂಚುವಂತಾಗಲಿ.

(ನ್ಯೂಸ್ ಕಡಬ) newskadaba.com .ಕೊಕ್ಕಡ, ಡಿ. 26 . ಸುಮಾರು 2,000 ವರ್ಷಗಳ ಹಿಂದೆ ಸರಳ ಜೀವನಕ್ಕೆ ಬಹುದೊಡ್ಡ ಮಾದರಿಯಾಗಿ ಹಟ್ಟಿಯಲ್ಲಿ ಹುಟ್ಟಿ ಮನುಕುಲದ ಉದ್ಧಾರಕ್ಕೆ ಆಗಮಿಸಿದ ಪ್ರಭು ಯೇಸುಕ್ರಿಸ್ತರ ಜನನದ ಆಚರಣೆಯೇ ಕ್ರಿಸ್ಮಸ್‌. ಸಿಹಿ ಹಂಚುತ್ತಾ ಮನೆ ಮನೆಗೆ ತಿರುಗುವ ಸಾಂತಾಕ್ಲಾಸ್‌ ಪ್ರೀತಿಯ ಸಂಕೇತ. ಹಬ್ಬಗಳೆಂದರೆ ಬರೇ ಆಡಂಬರಗಳೇ ಆಗದೆ ಪ್ರೀತಿ ಸಂತೋಷಗಳನ್ನು ಹಂಚುವಂತಾಗಲಿ. ಕ್ರಿಸ್ಮಸ್‌ ಶಾಂತಿ ಸಹಬಾಳ್ವೆಯ – ಪ್ರೀತಿ, ಸಂತೋಷದ ಬದುಕಿಗೆ ಪ್ರಚೋದನೆಯಾಗಲಿ ಎಂದು ಮಲಂಕರ ಕ್ಯಾಥೋಲಿಕ್‌ ಪುತ್ತೂರು ಧರ್ಮ ಪ್ರಾಂತ್ಯದ ವಿಕಾರ್‌ ಜನರಲ್‌ ವಂ| ಡಾ| ಎಲ್ದೋ ಪುತ್ತನ್‌ಕಂಡತ್ತಿಲ್‌ ಹೇಳಿದರು. ಬೆಥನಿ ಸಮೂಹ ಸಂಸ್ಥೆಗಳಾದ ಜ್ಞಾನೋದಯ ಪದವಿಪೂರ್ವ ಕಾಲೇಜು, ಎಸ್‌.ಬಿ. ಕಾಲೇಜು ನೆಲ್ಯಾಡಿ, ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನೆಲ್ಯಾಡಿ ಬೆಥನಿಯ ಸಿಲ್ವರ್‌ ಜೂಬಿಲಿ ಆಡಿಟೋರಿಯಂನಲ್ಲಿ ನಡೆದ ಕಿಸ್ಮಸ್‌ ಆಚರಣೆ ಉದ್ಘಾಟಿಸಿ ಮಾತನಾಡಿದರು.

Also Read  SSLC ಪರೀಕ್ಷೆಗೆ ಸಿದ್ಧತೆ ಪೂರ್ಣ ➤ ಎರಡೂ ಜಿಲ್ಲೆಗಳ ಶಾಲಾ ಆವರಣ ಸ್ಯಾನಿಟೈಸ್

ನೆಲ್ಯಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಮಾತನಾಡಿ, ಭಗವಾನ್‌ ಶ್ರೀಕೃಷ್ಣ ಹಾಗೂ ಪ್ರಭು ಯೇಸು ಕ್ರಿಸ್ತರ ಜನನ ಪೂರ್ವನಿರ್ಧಾರದಂತೆ ಆಗಿದೆ. ಧರ್ಮ ಸಂಸ್ಥಾಪನೆಯೇ ಇವರಿಬ್ಬರ ಜನನದ ಉದ್ದೇಶ. ಇಂತಹ ಆಚರಣೆಗಳಿಂದ ಯಾವುದೇ ಜಾತಿ, ಮತ, ಧರ್ಮ ಬೇಧವಿಲ್ಲದೆ ಎಲ್ಲರೂ ಒಂದಾಗಿ ಪ್ರೀತಿ ಶಾಂತಿ ನೆಮ್ಮದಿಯಿಂದ ಬಾಳೋಣ ಎಂದರು ಸಂಸ್ಥೆಯ ಸಂಚಾಲಕ ವಂ| ಡಾ| ವರ್ಗೀಸ್‌ ಕೈಪನಡುಕ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮೇರಿಕನ್‌ ಲೀಡರ್‌ಶಿಪ್‌ ಬೋರ್ಡಿಂದ ಸಮ್ಮಾನಿಲ್ಪಟ್ಟ ಸಂಸ್ಥೆಯ ಸಂಚಾಲಕರಾದ ವಂ| ಡಾ| ವರ್ಗೀಸ್‌ ಕೈಪನಡುಕ್ಕ ಅವರನ್ನು ನೆಲ್ಯಾಡಿ ಗ್ರಾ.ಪಂ. ವತಿಯಿಂದ ಅಭಿನಂದಿಸಲಾಯಿತು. ಸಂಸ್ಥೆಯ ಬರ್ಸಾರ್‌ ವಂ| ಐಸಕ್‌ ಸ್ಯಾಮುವೇಲ್‌ ಒಐಸಿ, ನೆಲ್ಯಾಡಿ ಗ್ರಾ.ಪಂ. ಸದಸ್ಯ, ಕೆ.ಪಿ. ಆಬ್ರಹಾಂ, ಬೆಥನಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಸಜಿ ಕೆ. ತೋಮಸ್‌ ಕ್ರಿಸ್ಮಸ್‌, ಸಾಂತಾಕ್ಲಾಸ್‌ ವೇಷಧಾರಿ ವಿದ್ಯಾರ್ಥಿ ನಿಖಿಲ್‌ ಉಪಸ್ಥತರಿದ್ದು ಶುಭ ಹಾರೈಸಿದರು.

Also Read  ಹಳೆಯಂಗಡಿ ಗ್ರಾಮದ ಜಲಶಕ್ತಿ - ಜಲಾಮೃತ ಅಭಿಯಾನದ ಬಗ್ಗೆ ➤ ವಿಶೇಷ ಗ್ರಾಮ ಸಭೆ, ವಾರ್ಡ್ ಸಭೆ ಹಾಗೂ ಜಮಾಬಂದಿ

 

 

error: Content is protected !!
Scroll to Top