ಯುವವಾಹಿನಿ(ರಿ.) ಕಡಬ: ದಿ| ವಿಶುಕುಮಾರ್ ಪರಿಚಯ ಸರಣಿ ಮಾಲಿಕೆ 11 ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.26. ಮಂಗಳೂರು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಕಥೆ, ನಾಟಕಕಾರ, ನಟ, ಕಾದಂಬರಿಕಾರ, ಸಾಹಿತಿ ದಿವಂಗತ ವಿಶು ಕುಮಾರ್ ಅವರ ಪರಿಚಯ ಸರಣಿ ಕಾರ್ಯಕ್ರಮದ ಮಾಲಿಕೆ 11 ಕಾರ್ಯಕ್ರಮವು ಕಡಬ ಘಟಕದ ಆತಿಥ್ಯದಲ್ಲಿ ಇತ್ತೀಚೆಗೆ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ, ಸಾಹಿತ್ಯ, ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿದ್ದ ವಿಶುಕುಮಾರ್ ನೆನಪಿನಲ್ಲಿ ಯುವ ವಾಹಿನಿ ನಡೆಸುತ್ತಿರುವ ಕಾರ್ಯಕ್ರಮಗಳು ಹಾಗೂ ಮುಂದೆ ಘಟಕಗಳು ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಯೋಗೀಶ್ ಕುಮಾರ್ ಅಗತ್ತಾಡಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯವರಿಗೆ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಆಲಂಕಾರು ಶಾಲು ಹೊದಿಸಿ ಅಭಿನಂದಿಸಿದರು.

Also Read  ಮಾಣಿ: ಖಾಸಗಿ ಬಸ್ಸುಗಳಿಗೆ ಕಲ್ಲೆಸೆದ ದುಷ್ಕರ್ಮಿಗಳು ➤ ಮೂರು ಬಸ್ಸುಗಳಿಗೆ ಹಾನಿ

ವೇದಿಕೆಯಲ್ಲಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್, ಬಿಲ್ಲವ ಸಮಾಜದ ಹಿರಿಯರಾದ ಬಾಳಪ್ಪ ಪೂಜಾರಿ ಸಾಂತ್ಯ, ಕೇಂದ್ರ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ದಯಾನಂದ ಕರ್ಕೇರ ಮಡ್ಯೊಟ್ಟು, ಘಟಕದ ಕಾರ್ಯದರ್ಶಿ ಮಿಥುನ್ ಸುಂದರ್ ಪಲ್ಲತ್ತಡ್ಕ, ನಿರ್ದೇಶಕರಾದ ಗಣೇಶ್ ನಡುವಾಲು, ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಬಾಬು ಪೂಜಾರಿ ಇದ್ಪಾಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಘಟಕದ ಜೊತೆ ಕಾರ್ಯದರ್ಶಿ ಅಭಿಲಾಶ್ ಪಿ.ಕೆ., ವಿವಿಧ ಪದಾಧಿಕಾರಿಗಳು ಹಾಜರಿದ್ದರು. ಸಂಘಟನಾ ಕಾರ್ಯದರ್ಶಿ ಗಳಾದ ನಾರಾಯಣ ಸಾಂತ್ಯ ಸ್ವಾಗತಿಸಿ, ಸದಸ್ಯೆ ಸುಲೋಚನಾ ಬರೆಂಬೆಟ್ಟು ವಂದಿಸಿದರು. ನಿರ್ದೇಶಕರಾದ ವಸಂತ ಪೂಜಾರಿ ಬದಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.

Also Read  ವಿಧಾನಸಭಾ ಚುನಾವಣೆ: ಮೇ.10ರಂದು ಸಂಜೆ 6 ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ

error: Content is protected !!
Scroll to Top