‘ಅತೃಪ್ತ ಬ್ಯಾಂಕ್ ನೌಕರರೇ, ಕೆಲಸ ಬಿಟ್ಟು ತೊಲಗಿ’ ► ನೀತಿ ತಂಡದಿಂದ ಸಾಮಾಜಿಕ ಜಾಲತಾಣದಲ್ಲಿ ವಿನೂತನ ಹೋರಾಟ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.25. ನಾವು ಕಟ್ಟುತ್ತಿರುವ ಬಡ್ಡಿಯ ಹಣದಿಂದ ವೇತನವನ್ನು ಪಡೆಯುತ್ತಿರುವ ಬ್ಯಾಂಕ್ ನೌಕರರು ತಮ್ಮ ವೇತನ ಪರಿಷ್ಕರಣೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯುವ ಸಮುದಾಯವು ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ವ್ಯಕ್ತಪಡಿಸುತ್ತಿದೆ.

‘ಜನ ಸಾಮಾನ್ಯರೇ ಎದ್ದೇಳಿ… ಅತೃಪ್ತ ಬ್ಯಾಂಕ್ ನೌಕರರೇ ಕೆಲಸ ಬಿಟ್ಟು ತೊಲಗಿ… ನೀತಿ ತಂಡದಿಂದ ವಿನೂತನ ರೀತಿಯ ಪ್ರತಿಭಟನೆ’ ಎಂಬ ತಲೆಬರಹದಡಿ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬ್ಯಾಂಕುಗಳ ಕೆಲಸದ ವೈಖರಿ ನೋಡಿ… 2018 ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಕೆಲಸ ಮಾಡದ ದಿನಗಳು
02: ಭಾನುವಾರ
08: ದ್ವಿತೀಯ ಶನಿವಾರ
09: ಭಾನುವಾರ
16: ಭಾನುವಾರ
21 ಶುಕ್ರವಾರ: ಬ್ಯಾಂಕ್ ಆಫೀಸರ್ ಗಳ ಮುಷ್ಕರ,
22: 4ನೇ ಶನಿವಾರ,
23: ಭಾನುವಾರ,
25: ಕ್ರಿಸ್ಮಸ್ ರಜೆ,
26: ಬ್ಯಾಂಕ್ ನೌಕರರ ಮುಷ್ಕರ.
30: ಭಾನುವಾರ
(ಇಲ್ಲಿ ಗಮನಿಸಬೇಕಾದ ಅಂಶವೆಂದರೆ 21ರಿಂದ 26 ವರೆಗೆ 24 ಹೊರತು ಪಡಿಸಿ ನಿರಂತರ ರಜೆ. ಹಾಗಾಗಿ ಸಿಬ್ಬಂದಿಯೊಬ್ಬನು/ ಳು 24ರಂದು ಕೂಡ ರಜೆ ಹಾಕಿದಲ್ಲಿ ನಿರಂತರ 6 ದಿನ ರಜೆ..! ಆ ದಿವಸ ಬ್ಯಾಂಕಿನಲ್ಲಿ ಸಾಮಾನ್ಯ ಹಣಕಾಸು ವ್ಯವಹಾರವಲ್ಲದೆ ಹೆಚ್ಚಿನ ಕೆಲಸಗಳು ನಡೆಯುವುದಿಲ್ಲ. ಯಾಕೆಂದರೆ ಸಿಬ್ಬಂದಿ ರಜೆ…!

Also Read  ➤ ಕುಡಿದು ಪೀಡಿಸುತ್ತಿದ್ದ ಮಗನನ್ನು ಕೊಂದ ತಂದೆ

ಇವರಿಗೆ ಯಾವುದರ ಕೊರತೆ ಹೇಳಿ..?
1. ಇವರಿಗಿದ್ದಷ್ಟು ವೇತನ ಯಾರಿಗಿದೆ?
2. ಇವರಿಗಿದ್ದಷ್ಟು ರಜೆ ಯಾರಿಗಿದೆ?
3. ಇವರಿಗಿದ್ದಷ್ಟು ಸೌಲಭ್ಯ ಯಾರಿಗಿದೆ?
4. ಇವರುಗಳ ಕೆಲಸದ ಅವಧಿ ಎಷ್ಟು?
5. ಎಲ್ಲ ಸರಕಾರಿ ಕಛೇರಿಗಳಲ್ಲಿ ನಮಗೆ ಸೇವೆಯು 10ರಿಂದ 5. 30 ಲಭ್ಯ. ಆದರೆ ಬ್ಯಾಂಕುಗಳಲ್ಲಿ?
6. ಕಂಪ್ಯೂಟರುಗಳಿಲ್ಲದಿದ್ದ ಕಾಲದಲ್ಲಿ ಇದ್ದ ಕೆಲಸದ ಅವಧಿಯೇ ಇನ್ನೂ ಇದೆ?
7. ಸರಣಿ ರಜೆಗಳಿಂದ ಮತ್ತು ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಯಾರು ಹೊಣೆ..?

 

ಇದೀಗ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದ್ದು, ಸರಕಾರದ ಕಾನೂನುಗಳಿಗೆ ಇವರನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಚಳುವಳಿಯಂತೆ ‘ಅತೃಪ್ತ ಬ್ಯಾಂಕ್ ನೌಕರರೇ ಕೆಲಸ ಬಿಟ್ಟು ತೊಲಗಿ’ ಎಂಬ ಚಳುವಳಿಯನ್ನು ರಾಷ್ಟ್ರದಾದ್ಯಂತ ಪ್ರಾರಂಭಿಸೋಣ. ಬ್ಯಾಂಕು ನೌಕರರಲ್ಲಿ ಯಾರಿಗಾದರೂ ಈಗಿರುವ ಸೌಲಭ್ಯಗಳು ಸಾಲದೆಂದು ಅನಿಸುತ್ತಿದ್ದಲ್ಲಿ ಮುಲಾಜಿಲ್ಲದೆ ಕೆಲಸ ಬಿಟ್ಟು ತೊಲಗಲಿ. ಆ ಮೂಲಕ ಸಹಸ್ರಾರು ನಿರುದ್ಯೋಗಿ ಯುವಕ ಯುವತಿಯರ ಬಾಳು ಬೆಳಗಲಿ. ಎದ್ದೇಳಿ ನಾಗರಿಕರೇ ಎದ್ದೇಳಿ, ನಮ್ಮ ಹಕ್ಕುಗಳಿಗಾಗಿ ಹೋರಾಡೋಣ. ದಯವಿಟ್ಟು ಈ ಪೋಸ್ಟನ್ನು ನಿಮ್ಮ ಪರಿಚಯದ ಎಲ್ಲಾ ಗ್ರೂಪುಗಳಿಗೂ ಶೇರ್ ಮಾಡಿ, ನೀತಿ ತಂಡ ಉಡುಪಿ ಎಂಬ ಹೆಸರಿನಲ್ಲಿ ಹರಿದಾಡುತ್ತಿದೆ.

Also Read  ಬಿಲ್ ಪಾವತಿಗೆ 30 ದಿನಗಳ ಗಡುವು ಮೀರಿದಲ್ಲಿ ವಿದ್ಯುತ ಸಂಪರ್ಕ ಕಡಿತ- ಬೆಸ್ಕಾಂ

error: Content is protected !!
Scroll to Top