ಕೋಡಿಂಬಾಳ: ಸ.ಉ.ಹಿ.ಪ್ರಾ ಶಾಲಾ ವಾರ್ಷಿಕೋತ್ಸವ  ► ಊರವರ ಸಹಕಾರವಿದ್ದಾಗ ಸರಕಾರಿ ಶಾಲೆಗಳ ಉಳಿವು ಸಾಧ್ಯ – ಪಿ.ಪಿ.ವರ್ಗೀಸ್

(ನ್ಯೂಸ್ ಕಡಬ) newskadaba.com ಕಡಬ,  ಡಿ.25.ಕೋಡಿಂಬಾಳ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ದ.22ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಪುಟಾಣಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಸರಕಾರ ಇಂದು ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಅವರಿಗೆ ಬೇಕಾದ ಪೌಷ್ಠಿಕ ಆಹಾರ ವಿತರಿಸುತ್ತಿದೆ. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದ್ದು, ಸರಕಾರ ಈ ರೀತಿಯಾಗಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವಾಗ ಹೆತ್ತವರು ತಮ್ಮ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಠಿಸಿಬೇಕಾಗಿದ್ದು, ಇಂದು ಖಾಸಗಿ ಶಾಲೆಗಳ ಪೈಪೋಟಿ ಮಧ್ಯೆಯೂ ಸರಕಾರಿ ಶಾಲೆಗಳು ಉಳಿಯುತ್ತಿವೆ ಎಂದಾದರೆ ಅದಕ್ಕೆ ಊರಿನವರ ಸಹಕಾರ ಅಗತ್ಯವಾಗಿದ್ದು, ಈ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಲು ಇಲ್ಲಿನ ನಾಗರಿಕರ, ವಿದ್ಯಾಭಿಮಾನಿಗಳ ಸಹಕಾರ, ಒಗ್ಗಟ್ಟು ಕಾರಣ ಎಂದ ಅವರು ಇಲ್ಲಿಯ ಅಂಗನವಾಡಿಗೆ ಬರುವ ವರ್ಷ ತೂಗೊಯ್ಯಲೆ ಒದಗಿಲಾಗುವುದು ಜೊತೆಗೆ ಈ ಶಾಲೆಯ ಬೇಡಿಕೆಗಳ ಬಗ್ಗೆ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿ ಶುಭಹಾರೈಸಿದರು.

ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ ಗುಣಮಟ್ಟದ ಶಿಕ್ಷಣಕ್ಕಾಗಿ ಸರಕಾರಿ ಶಾಲೆಗಳನ್ನೇ ಅವಲಂಭಿಸಬೇಕು. ಸರಕಾರ ಸರಕಾರಿ ಶಾಲೆಗಳಿಗೆ ಇನ್ನಿಲ್ಲದ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅದನ್ನು ಗ್ರಾಮಸ್ಥರಾದ ನಾವು ಸದುಪಯೋಗ ಪಡಿಸಿಕೊಳ್ಳಬೇಕು. ಕೆಲವು ವರ್ಷಗಳಿಂದ ಖಾಸಗಿ ಶಾಲೆಗಳ ವ್ಯಾಮೋಹದಿಂದ ಬೇಕಾದಷ್ಟು ಹಣ ಖರ್ಚು ಮಾಡುವ ಮೂಲಕ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಈಗ ಮತ್ತೆ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದು, ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ನಿದರ್ಶನವಾಗಿದೆ ಎಂದರು. ತಾನು ಒಬ್ಬ ಈ ಭಾಗದ ತಾ.ಪಂ.ಸದಸ್ಯನಾಗಿ ಈ ವಿದ್ಯಾದೇಗುಲದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದರು.

Also Read  ಪುತ್ತೂರಿನ ಯುವತಿ ವಿಷ ಸೇವಿಸಿ ಬೆಂಗಳೂರಿನಲ್ಲಿ ಆತ್ಮಹತ್ಯೆ..!​


ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರ.ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಮಾತನಾಡಿ, ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವ ಮೂಲಕ ಗುಣಮಟ್ಟದ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿಸುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿಸಲು ಪಾಲಕರು ಕೈಜೋಡಿಸಬೇಕೆಂದರು.ಕಡಬಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.ಭೂ ಮಾಪನ ಇಲಾಖಾ ನಿವೃತ್ತ ಅಧೀಕ್ಷಕ, ವಾರ್ಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಶೇಷಪ್ಪ ಗೌಡ, ಕಡಬ ಗ್ರಾ.ಪಂ.ಸದಸ್ಯರಾದ ನಾರಾಯಣ ಪೂಜಾರಿ, ನೇತ್ರಾ, ಯಶೋಧ, ಸಂದ್ಯಾ ಮೋಹನ, ಎಸ್.ಡಿ.ಎಂ.ಸಿ.ಅಧ್ಯಕ್ಷ ಕೆ.ಸುರೇಶ್ ಕೋಲ್ಪೆ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಕೆ.ಸುದರ್ಶನ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟ್ರಮಣ ಕುತ್ಯಾಡಿ, ಕಡಬ ಶಾಲಾ ಮುಖ್ಯ ಶಿಕ್ಷಕ ಹಮೀದ್ ಕೆ., ನಿವೃತ್ತ ಶಿಕ್ಷಕಿ ಜಾನಕಿ ಟಾಮೋಧರ, ಹಿರಿಯರಾದ ಧರ್ಣಪ್ಪ ಮಜ್ಜಾರು, ಹಿರಿಯ ವಿದ್ಯಾರ್ಥಿ ಅಣ್ಣಿ ಪೂಜಾರಿ, ಶಾಲಾ ನಾಯಕ ಪ್ರಜ್ವಲ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಕೊೈಲ: ರಸ್ತೆ ಕಾಮಗಾರಿಗೆ 1.25 ಕೋಟಿ ರೂಪಾಯಿ ಅನುದಾನ ಮಂಜೂರು ➤ ಎಸ್. ಅಂಗಾರ

ದಾಮೋದರ ಕೊಡೆಂಕೀರಿ, ಇಬ್ರಾಹಿಂ ಗುಂಡಿ ಮಜಲು, ಶೇಷಪ್ಪ ಪೂಜಾರಿ ಅಂಬೆತಡ್ಕ, ಜಯಾನಂದ, ಹನೀಫ್ ಕೋಡಿಂಬಾಳ, ತನಿಯಪ್ಪ ಸಂಪಡ್ಕ, ಶೀನಾ ಕಲ್ಪುರೆ, ಹರಿಣಾಕ್ಷಿ, ಸವಿತಾ, ಪದ್ಮಲತಾ, ಪುಷ್ಪಾವತಿ, ರವಿಚಂದ್ರ ರೈ ಮಡ್ಯಡ್ಕ, ಮೇದಪ್ಪ ಪೂಜಾರಿ, ಧರ್ಣಪ್ಪ ಮಜ್ಜಾರು, ವಿದ್ಯಾರ್ಥಿ ಸುಜಿತ್ ಅತಿಥಿಗಳನ್ನು ಹೂ ನೀಡಿ ಗೌರವಿಸಿದರು.ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಾಲಾ ವಾರ್ಷಿಕೋತ್ಸವ ಸಮಿತಿ ಉಪಾಧ್ಯಕ್ಷ ದೈವಜ್ಞ ಕೆ.ಪ್ರಸಾದ್ ಕೆದಿಲಾಯ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಕೆ.ಸುದರ್ಶನ ಗೌಡ ಕೋಡಿಂಬಾಳ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ್ ಕೋಲ್ಪೆ, ಉಪಾಧ್ಯಕ್ಷೆ ಸರಿತಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟ್ರಮಣ ಕುತ್ಯಾಡಿ, ಸ್ವಾಗತ ಸಮಿತಿ ನಾರಾಯಣ ಪೂಜಾರಿ ಸೇರಿದಂತೆ ಶಾಲಾ ವಾರ್ಷಿಕೋತ್ಸವ ಸಮಿತಿಯವರು, ಶಾಲಾ ಎಸ್‍ಡಿಎಂಸಿ ಯವರು, ವಾರ್ಷಿಕೋತ್ಸವದ ಯಶಸ್ಸಿಗೆ ಸಹಕರಿಸಿದರು.ಶಾಲಾ ಗೌರವ ಶಿಕ್ಷಕಿಯರಾದ ಕು.ಪವಿತ್ರ ಹಾಗೂ ಯಾದವಿ ಕುತ್ಯಾಡಿ ಯವರನ್ನು ಗೌರವಿಸಲಾಯಿತು. ಬೋಜನ ವ್ಯವಸ್ಥೆ ಮಾಡಲಾಗಿತ್ತು.ಶಾಲಾ ಶಿಕ್ಷಕ ನೀಲಯ್ಯ ವಾರ್ಷಿಕ ವರದಿ ವಾಚಿಸಿದರು. ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅಂಗನವಾಡಿ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ಕಾಮರಾಜು ಕೆ.ಸಿ. ಸ್ವಾಗತಿಸಿ, ಶಿಕ್ಷಕ ನೀಲಯ್ಯ ನಾಯ್ಕ ವಂದಿಸಿದರು. ಆನಂದ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರಾದ ಅರ್ಚನಾ, ಶ್ರದ್ಧಾ, ಪುಣ್ಯಶ್ರೀ, ವಂದನಾ ಪ್ರಾರ್ಥನೆ ಹಾಡಿದರು.

error: Content is protected !!
Scroll to Top