ಗಂಡಿಬಾಗಿಲು: ಖುತುಬಿಯ್ಯತ್ ನೇರ್ಚೆ 45ನೇ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,  ಡಿ. 25.  ಊರು, ಸಮಾಜದ ಅಭಿವೃದ್ಧಿಯ ಚಿಂತನೆಯೊಂದಿಗೆ ಒಳ್ಳೆಯ ಕೆಲಸ ಮಾಡಿದರೆ ಅಂತಹವರಿಗೆ ಅಲ್ಲಾಹುವಿನ ಕಡೆಯಿಂದ ಸಹಾಯ ದೊರಕುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಎನ್.ಪಿ.ಎಂ. ಜಲಾಲುದ್ದೀನ್ ತಂಙಳ್ ಕುನ್ನುಂಗೈ ಹೇಳಿದರು.ಅವರು ಡಿ. 23ರಂದು ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಕಮಿಟಿ, ಖುತುಬಿಯ್ಯಾ ಜುಮಾ ಮಸೀದಿ ಗಂಡಿಬಾಗಿಲು ಇಲ್ಲಿ ಪ್ರತಿ ತಿಂಗಳು ಆಚರಿಸಿಕೊಂಡು ಬರುತ್ತಿರುವ ಖುತುಬಿಯ್ಯತ್ ನೇರ್ಚೆಯ 45ನೇವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗಂಡಿಬಾಗಿಲು ಖುತುಬಿಯ್ಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಅನಸ್ ಅಲ್‍ಹಾದಿ ತಂಙಳ್ ಅಲ್-ಅಝ್‍ಹರಿ ಮಾತನಾಡಿ 45 ವರ್ಷಗಳ ಹಿಂದೆ ಆರಂಭಗೊಂಡ ಇಲ್ಲಿನ ಕುತುಬಿಯ್ಯತ್ ನೇರ್ಚೆ ಬಹಳ ಪಾವಿತ್ರತೆ ಹೊಂದಿದ್ದು, ಇಲ್ಲಿಗೆ ಸಲ್ಲಿಕೆ ಆಗುವ ಹರಕೆ, ಪ್ರಾರ್ಥನೆಗಳು ಸಾವಿರಾರು ಜನರ ಸಮಸ್ಯೆಗಳು ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿ ಆಗಿದೆ ಎಂದರು.


ಗಂಡಿಬಾಗಿಲು ನುಜೂಮುಲ್ ಇಸ್ಲಾಂ ಯಂಗ್‍ಮೆನ್ಸ್ ಗೌರವಾಧ್ಯಕ್ಷ ಡಾ| ಕೆ.ಎಂ. ಶಾಹ್ ಮುಸ್ಲಿಯಾರ್ ದುವಾಃ ನೆರವೇರಿಸಿದರು. ಅಬೂಬಕ್ಕರ್ ಸಿದ್ದಿಕ್ ಅಹ್ಮದ್ ಜಲಾಲಿಮುಖ್ಯ ಪ್ರಭಾಷಣ ನೀಡಿದರು. ಸಮಾರಂಭದಲ್ಲಿ ಸಂಸ್ಥೆಯ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿರುವ ಡಾ| ಕೆ.ಎಂ. ಶಾಹ್ ಮುಸ್ಲಿಯಾರ್, ಹಾಜಿ ಬಿ.ಪಿ. ಅಬ್ದುಲ್ರಹಿಮಾನ್ಮುಸ್ಲಿಯಾರ್ ಬಡ್ಡಮೆ, ಹೆಚ್. ಅಬ್ಬಾಸ್ ಹಾಜಿ, ಜಿ. ಯೂಸುಫ್ ಹಾಜಿ ಇವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಗಂಡಿಬಾಗಿಲು ಮದ್ರಸದ ಸದರ್ಮುಅಲ್ಲಿಂ ಮೂಸಾ ಮುಸ್ಲಿಯಾರ್, ಕೆಮ್ಮಾರ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಕೆಮ್ಮಾರ ಶಕ್ತಿನಗರ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ಲ ಮುಸ್ಲಿಯಾರ್, ಕೆಮ್ಮಾರ ಹಿದಾಯತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಎನ್.ಎ. ಇಸಾಕ್, ಗಂಡಿಬಾಗಿಲು ಮಸೀದಿ ಸಮಿತಿ ಅಧ್ಯಕ್ಷ ಹಸೈನಾರ್ ಹಾಜಿ, ಎಸ್. ಆದಂ ಹಾಜಿ, ಇಬ್ರಾಹಿಂ ಮುಸ್ಲಿಯಾರ್ ನೀರಾಜೆ, ಸಂಶುದ್ದೀನ್ ಹನೀಫಿ, ಕೊೈಲ ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ನಝೀರ್ ಪೂರಿಂಗ, ಗಂಡಿಬಾಗಿಲು ಮಸೀದಿ ಮುಅಲ್ಲಿಂ ಮಹಮ್ಮದ್ ರಫೀಕ್ ಮುಸ್ಲಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಮೂರೇ ತಿಂಗಳಲ್ಲಿ ತುಳು ಕಲಿತ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ► ತುಳು ಭಾಷೆಯ ವ್ಯಾಮೋಹದಿಂದ ಮನೆಯಲ್ಲೂ ತುಳುಭಾಷೆ

ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಡಿ. 21ರಂದು ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೈಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್, ಡಿ. 22ರಂದು
ಮುಕ್ವೆ ಜುಮಾ ಮಸೀದಿ ಖತೀಬ್ ಶರೀಫ್ ಅರ್ಶದಿ ಧಾರ್ಮಿಕ ಉಪನ್ಯಾಸ ನೀಡಿದರು.ಸಮಾರಂಭದಲ್ಲಿ ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಕಮಿಟಿ ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್ ಸ್ವಾಗತಿಸಿ, ಯಂಗ್‍ಮೆನ್ಸ್ ಅಧ್ಯಕ್ಷ ಅಬ್ದುಲ್ಲ ನೀರಾಜೆ ವಂದಿಸಿದರು. ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಎಸ್.ಪಿ. ಖಲಂದರ್, ಹಾರಿಸ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರಫೀಕ್ ಆತೂರು ಕಾರ್ಯಕ್ರಮ ನಿರೂಪಿಸಿದರು.

Also Read  ಮಡಂತ್ಯಾರು: ಲಾರಿ - ಕಾರು ಢಿಕ್ಕಿ ► ಮಗು ಸಹಿತ ನಾಲ್ವರು ಗಂಭೀರ

error: Content is protected !!
Scroll to Top