ಕಡಬ: ಕರ್ನಾಟಕ ದ.ಸಂ.ಸ. ವತಿಯಿಂದ ಅಂಬೇಡ್ಕರ್ ಪರಿನಿಬ್ಬಾನ ದಿನಾಚರಣೆ

(ನ್ಯೂಸ್ ಕಡಬ) newskadaba.com  ಡಿ.  25. ಕಡಬ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ. ಕೃಷ್ಣಪ್ಪ ಸ್ಥಾಪಿತ 47.74/75) ಕಡಬ ತಾಲ್ಲೂಕು ಶಾಖೆ ವತಿಯಿಂದ 62 ನೇ ವರ್ಷದ ಅಂಬೇಡ್ಕರ್ ಪರಿನಿಬ್ಬಾನದಿನಾಚರಣೆಯನ್ನು ಕಡಬದ ಅಂಬೇಡ್ಕರ್ ಭವನದಲ್ಲಿ ದ.16ರಂದು ಆಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಸಂಸ ಹಿರಿಯ ಮುಖಂಡ ಆನಂದ ಮಿತ್ತಬೈಲ್ ಬಾಬಾ ಸಾಹೇಬರು ತನ್ನ ಇಡೀ ಜೀವನವನ್ನೇ ನಮ್ಮ ಏಳಿಗೆಗಾಗಿ ಮುಡಿಪಿಟ್ಟ ಧೀಮಂತ ವಿಶ್ವ ನಾಯಕರಾಗಿದ್ದು, ತನ್ನ ಮಗನ ಶವಕ್ಕೆ ಹಾಕಲು ಬಟ್ಟೆ ಇಲ್ಲದಿದ್ದರೂ ತನ್ನ ಪತ್ನಿಗೆ ಸೀರೆ ಇಲ್ಲದ ಸಂದರ್ಭದಲ್ಲಿಯೂ ಅವರು ಹೋರಾಟದಿಂದ ಹಿಂದೆ ಸರಿದಿರಲಿಲ್ಲ. ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ನಾವು ಯಾವತ್ತು ಮರೆಯಬಾರದು. ಇವತ್ತು ಹೋರಾಟಗಾರರನ್ನು ಎದರಿಸುವಂತಹ ಕೆಲಸ ನಡೆಯುತ್ತಿದೆ ಇದಕ್ಕೆ ನಾವು ಜಗ್ಗುವುದಿಲ್ಲ ನಾವು ಛತ್ರಪತಿ ಶಾಹು ಮಹಾರಾಜ ಅಶೋಕ ಚಕ್ರವರ್ತಿ ಪೆರಿಯರ್ ಟಿಪ್ಪುವಿನ ವಿಚಾರದಿಂದ ಪ್ರೇರಣೆ ಪಡೆದವರು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲುಕು ಸಂಚಾಲಕ ಉಮೇಶ್ ಕೂಂಡಿಬಾಳ ಮಾತನಾಡಿ ಅಂಬೇಡ್ಕರ್ ರವರ ವಿಚಾರವನ್ನು ಹೆಚ್ಚು ಹೆಚ್ಚು ತಿಳಿಯುವುದರ ಮೂಲಕ ನಾವು ಜಾಗೃತರಾಗುವುದರೂಂದಿಗೆ ನಮ್ಮ ಸಮಾಜವನ್ನು, ಸಮುದಾಯದಲ್ಲಿ ಜಾಗೃತಿ ಮಾಡುವುದರ ಜೊತೆ ಸಂಘಟನೆಯನ್ನು ಬಲಿಷ್ಠ ಮಾಡಲು ಎಲ್ಲರು ಸಹಕರಿಸಬೇಕೆಂದರು. ಪುತ್ತೂರು ತಾಲೂಕು ಸಂಚಾಲಕ ಗಣೇಶ್ ಗುರಿಯಾನ ಮಾತನಾಡಿ ಅಂಬೇಡ್ಕರ್ ಅವರು ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಬಡತನ, ಅನಕ್ಷರತೆ, ನಿರುದ್ಯೋಗ, ಅಸ್ಪೃಶ್ಯತೆಯಂತಹ ಸಮಸ್ಯೆಯನ್ನು ಪರಿಹಾರ ಮಾಡಲು ಶ್ರಮಿಸಿದರು. ಅದಕ್ಕಾಗಿ ನಾವು ಅವರ ಹೋರಾಟವನ್ನು ಮುಂದುವರಿಸಲು ಜಾತಿಯನ್ನು ಬಿಟ್ಟು ಚಳುವಳಿಯನ್ನು ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

Also Read  ಗಾಯಕಿ ಎಸ್‌. ಜಾನಕಿ ಆರೋಗ್ಯವಾಗಿದ್ದಾರೆ ➤ ಎಸ್ ಪಿ ಬಿ ಸ್ಪಷ್ಟನೆ 


ಬೌದ್ಧ ಧಮ್ಮಚಾರಿ ನಯನ್ ಕುಮಾರ್ ತೋಟಂತಿಲ ಮಾತನಾಡಿ ಅಂಬೇಡ್ಕರ್ ಅವರು ವಿಶ್ವದ ಎಲ್ಲಾ ಧರ್ಮವನ್ನು ಅಧ್ಯಯನ ಮಾಡಿಯೇ ಬೌದ್ಧ ಧರ್ಮವನ್ನು ಸ್ವೀಕರಿಸಿದರು, ಬೌದ್ಧ ಧರ್ಮದಲ್ಲಿರುವ ತ್ಯಾಗ ಪ್ರೀತಿ ಸಹೋದರತೆ ಬೇರೆ ಯಾವ ಧರ್ಮದಲ್ಲೂ ಕಾಣ ಸಿಗದು ಎಂದರು. ದಿಂ. ಎಂ ಕೂಸಪ್ಪ ರವರ ಧರ್ಮಪತ್ನಿ ಸುಶೀಲಾ ಕುರಿಯ ಮಾತನಾಡಿ ಮಹಿಳೆಯರು ಇವತ್ತು ಶಿಕ್ಷಣ ಉದ್ಯೋಗದಂತಹ ಸವಲತ್ತು ಪಡೆಯಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಕಾರಣ ಎಂದರು ಅಂಬೇಡ್ಕರ್ ಅವರು ನಮಗೆ ನೀಡಿದ ಕೊಡುಗೆಗಳನ್ನು ಅರ್ಥ ಮಾಡಿಕೊಂಡು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಚಳವಳಿಯಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

Also Read  ಕಡಬ ಠಾಣಾ ಕಟ್ಟಡದ ಮೇಲ್ಚಾವಣಿಯಿಂದ ನೀರಿನ ಒರತೆ ► ಕಳಪೆ ಕಾಮಗಾರಿ


ಪುತ್ತೂರು ತಾಲ್ಲೂಕು ಸಂಘಟನಾ ಸಂಚಾಲಕ ಹರೀಶ್ ಅಂಕಜಾಲ್ ಮಾತನಾಡಿ ದಲಿತರ ಜೀವನದಲ್ಲಿ ಇವತ್ತು ಸ್ವಲ್ಪ ಏನಾದರೂ ಬದಲಾವಣೆ ಕಂಡಿದ್ದರೆ ಅದಕ್ಕೆ ಬಾಬಾ ಸಾಹೇಬರ ಸಂವಿಧಾನವೇ ಮೂಲ ಕಾರಣ ನಮ್ಮ ಪೂರ್ವಜರ ಶ್ರಮದ ಫಲವಾಗಿ ನಾವಿವತ್ತು ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಪಡೆದಿದ್ದೇವೆ ನಮಗೆ ಸಿಕ್ಕ ಸ್ವಾತಂತ್ರ್ಯ ನಮ್ಮ ಮಕ್ಕಳಿಗೆ ಸಿಗಬೇಕಾದರೆ  ನಾವು ಹೋರಾಟವನ್ನು ರೂಪಿಸಬೇಕು ಎಂದರು. ದಸಂಸ ಹಿರಿಯ ಮುಖಂಡ ಪುಟ್ಟಣ್ಣ ತೋಟಂತಿಲ. ಅಣ್ಣು ಪೇರ್ಮಜಲು, ರವಿ ಮರ್ದಾಳ, ಎಸ್‍ಡಿಪಿಐ ಪಕ್ಷ ಬೆಂಬಲಿತ ಸವಣೂರು ಗ್ರಾಪಂ ಸದಸ್ಯೆ ಮೀನಾಕ್ಷಿ ಬಂಬಿಲ, s ಸುಂದರ ಮೀನಾಕ್ಷಿ ಅಸಂತಡ್ಕ ಹಾಗೂ ದಸಂಸ ಕಾರ್ಯಕರ್ತರು ಅಂಬೇಡ್ಕರ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಣೇಶ್ ಕಾಯರ್ತಡ್ಕ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದ್ದರು.

error: Content is protected !!
Scroll to Top