ಕಡಬದಿಂದ ಶಬರಿಮಲೆಗೆ ಪಾದಯಾತ್ರೆ

(ನ್ಯೂಸ್ ಕಡಬ) newskadaba.com  ಡಿ.  25. ಕಡಬ. ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಡಬದಿಂದ ನಾಲ್ವರು ಭಕ್ತರು ಪಾದಯಾತ್ರೆಯನ್ನು ಸೋಮವಾರದಿಂದ ಕೈಗೊಂಡಿದ್ದಾರೆ.ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಕಾರ್ಯದರ್ಶಿ ಮನೋಹರ್ ರೈ ಬೆದ್ರಾಜೆ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕಳಾರ ಹಾಗೂ ಕಡಬ ಶ್ರೀ ದೇವಿ ಪ್ರೈಬ್ರೀಕೇಶನ್‍ನ ಸಹನ್ ಮತ್ತು ಇಚ್ಲಂಪಾಡಿಯ ವೇಣುಗೋಪಾಲ ರೈ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟವರು.


ಸೋಮವಾರ ಕಡಬ ಬೆದ್ರಾಜೆ ಮನೆಯಲ್ಲಿ ಗೋಳಿಯಡ್ಕ ಶ್ರೀ ರವೀಂದ್ರನ್ ಗುರುಸ್ವಾಮಿಯವರ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಹೊರಟಿದ್ದಾರೆ, ಮನೋಹರ್ ರೈ ಹಾಗೂ ದಿನೇಶ್ ಶೆಟ್ಟಿಯವರು ಇದೀಗ ಎರಡನೆ ಬಾರಿಗೆ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟಿದ್ದಾರೆ. ಅವರುಗಳು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಆಗಮಿಸಿದಾಗ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ  ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ದೇವಳದ ಅರ್ಚಕ ಪ್ರಶಾಂತ್ ಭಟ್ ಶ್ರೀ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಬೀಳ್ಕೋಟ್ಟರು.

Also Read  ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ದಿಢೀರ್ ಅಸ್ವಸ್ಥಗೊಂಡು ಮೃತ್ಯು ➤ ಹೃದಯಾಘಾತ ಶಂಕೆ

error: Content is protected !!
Scroll to Top