ಹೊಸ ವರ್ಷದಿಂದ ಹೊಸ ನಿಯಮ ► ಕಾರು ಕೊಳ್ಳುವವರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ : !

(ನ್ಯೂಸ್ ಕಡಬ) newskadaba.com  ಡಿ.  22.ನವದೆಹಲಿ :ದಿಲ್ಲಿ ಟ್ರಾನ್ಸ್ ಪೋರ್ಟ್  ಇಲಾಖೆ ಮೂರು ಮುನಿಸಿಪಲ್ ಕಾರ್ಪೊರೇಷನ್ಗಳಲ್ಲಿ  ಒಂದು ಹೊಸ ನಿಯಮವನ್ನುಜಾರಿ ತರುತ್ತಿದೆ.ದಿಲ್ಲಿಯಲ್ಲಿ ಕಾರು ಕೊಳ್ಳಲು 2019ನೇ ಸಾಲಿನಿಂದ ಒನ್ ಟೈಮ್ ಪಾರ್ಕಿಂಗ್ ಶುಲ್ಕವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭರಿಸಬೇಕಿದೆ.  ಸದ್ಯ ಇರುವ ಶುಲ್ಕಕ್ಕಿಂತ 18 ಪಟ್ಟು ಏರಿಕೆಯಾಗಲಿದೆಯಂತೆ.ಟ್ರಾನ್ಸ್ ಪೋರ್ಟ್ ಕಮಿಷನರ್  ವರ್ಷ ಜೋಶಿ ಮಾಹಿತಿ ನೀಡಿದ್ದು,  ಜನವರಿ 1, 2019ರಿಂದ ನೂತನ ಪಾರ್ಕಿಂಗ್ ಶುಲ್ಕ ನೀತಿ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಸದ್ಯ ಪಾರ್ಕಿಂಗ್ ಶುಲ್ಕವು 6 ಸಾವಿರದಿಂದ 75 ಸಾವಿರದವರೆಗೂ ಏರಿಕೆಯಾಗಿದೆ.ಶುಲ್ಕವನ್ನುಮುನಿಸಿಪಲ್ ಕಾರ್ಪೊರೇಷನ್ ನೇತೃತ್ವದಲ್ಲಿ ಸಾರಿಗೆ ಇಲಾಖೆ  ಸಂಗ್ರಹಿಸುತ್ತದೆ. ವಾಣಿಜ್ಯಿಕ ವಾಹನಗಳಿಗೆ 2500 ರಿಂದ ಆರಂಭವಾಗಿ 25 ಸಾವಿರ ರೂ ವರೆಗೆ ಇರಲಿದೆ. ಇನ್ನು ಖಾಸಗಿ ಕಾರುಗಳು ಹಾಗೂ ಎಸ್ ಯುವಿ ರೇಂಜ್ ವಾಹನಗಳಿಗೆ  6 ಸಾವಿರದಿಂದ 75 ಸಾವಿರ ವರೆಗೂ ಇರಲಿದೆ ಎಂದು ಜೋಶಿ ತಿಳಿಸಿದ್ದಾರೆ.

Also Read  ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಓಪನ್ ➤ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸದ್ಯಕ್ಕಿಲ್ಲ

error: Content is protected !!
Scroll to Top