ಬಂಟ್ವಾಳ ಗೃಹರಕ್ಷಕ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ಭೇಟಿ

(ನ್ಯೂಸ್ ಕಡಬ) newskadaba.com  ಬಂಟ್ವಾಳ ಡಿ. 22. ದಿನಾಂಕ 21-12-2018ರ ಶುಕ್ರವಾರ ಬಂಟ್ವಾಳ ಗೃಹರಕ್ಷಕ ಘಟಕದ ವಾರದ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ರವರು ಭೇಟಿ ನೀಡಿ ವಾರದ ಕವಾಯತು ವೀಕ್ಷಣೆ ನಡೆಸಿದರು. ನಂತರ ಬಂಟ್ವಾಳ ಘಟಕದಲ್ಲಿ ಸುಮಾರು 26 ವರ್ಷ ಸೇವೆ ಸಲ್ಲಿಸಿದ ಐತ್ತಪ್ಪರವರನ್ನು ತಿಂಗಳ ಗೃಹರಕ್ಷಕರಾಗಿ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರುರವರು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕಮಾಡೆಂಟ್  ಗೃಹರಕ್ಷಕ ಐತ್ತಪ್ಪರವರ 26 ವರ್ಷದ ಸೇವೆ ಇಲಾಖೆ ಗೌರವ ತಂದಿದೆ. ಗೃಹರಕ್ಷಕರು ಸಮಾಜದ ಆಸ್ತಿ ಎಂದು ಹೇಳಿದರು.

ನಂತರ ವಿವಿಧ ಇಲಾಖೆಯ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಗಳನ್ನು 3 ತಿಂಗಳಿಗೊಮ್ಮೆ ಬದಲಾವಣೆ ಮಾಡಲು ಘಟಕಾಧಿಕಾರಿಗೆ ಸೂಚಿಸಿದರು ಕಾರ್ಯಕ್ರಮದಲ್ಲಿ ಬಂಟ್ವಾಳ ಘಟಕಾಧಿಕಾರಿ ಶ್ರೀನಿವಾಸ್ ಆಚಾರ್ಯ ಸ್ವಾಗತಿಸಿದರು. ಬಂಟ್ವಾಳ ಘಟಕದ ಹಿರಿಯ ಗೃಹರಕ್ಷಕ ಶಿವರಾಜ್ ವಂದಿಸಿದರು. ಈವೇಳೆಗೆ ಬಂಟ್ವಾಳ ಮಾಜಿ ಘಟಕಾಧಿಕಾರಿ ಕೃಷ್ಣ ನಾಯಕ್ ಹಾಗೂ ಘಟಕದ 65 ಗೃಹರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.

Also Read  ಸುಳ್ಯ: ವೃದ್ದ ಮಹಿಳೆಗೆ ಸ್ಕೂಟರ್ ಢಿಕ್ಕಿ ➤ ಇಬ್ಬರಿಗೆ ಗಾಯ

error: Content is protected !!
Scroll to Top