ಬೆಳ್ಳಂಬೆಳಗ್ಗೆ ಆಲಂಕಾರಿನಲ್ಲಿ ಬಂದಿಳಿದ ಚಲನಚಿತ್ರ ನಟ ಹುಚ್ಚ ವೆಂಕಟೇಶ್ ► ಹುಚ್ಚುಚ್ಚಾಗಿ ಹಾಡುತ್ತಾ, ತನ್ನಷ್ಟಕ್ಕೇ ನಗಾಡುತ್ತಾ ಅಭಿಮಾನಿಗಳನ್ನು ರಂಜಿಸಿದ ವೆಂಕಟ್

(ನ್ಯೂಸ್ ಕಡಬ) newskadaba.com  ಆಲಂಕಾರು,  ಡಿ. 21.  ಚಲನಚಿತ್ರ ನಟ ಹುಚ್ಚಾ ವೆಂಕಟೇಶ್ ಆಲಂಕಾರು ಪೇಟೆಯಲ್ಲಿ ಬೆಳ್ಳಂಬೆಳಿಗ್ಗೆ ಸುತ್ತಾಡಿದ ಘಟನೆ ಶುಕ್ರವಾರ ನಡೆದಿದೆ. ಮಡಿಕೇರಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ರಾತ್ರಿಯವರಗೆ ನಡೆದ ಚಲನಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಮೂಲಕ ಉಡುಪಿಗೆ ಹೊರಟಿದ್ದರು. ಬೆಳಿಗ್ಗೆ ಏಳು ಗಂಟೆಯ ಸಮಯಕ್ಕೆ ಕಾರನ್ನು ತಾನೇ ಚಲಾಯಿಸಿಕೊಂಡು ಆಲಂಕಾರಿಗೆ ಆಗಮಿಸಿದ್ದರು. ಕಾರಿನಿಂದ ಇಳಿದ ವೆಂಕಟೇಶ್ ಥೇಟ್ ಹುಚ್ಚನಂತೆ ಕೈಯನ್ನು ಹಿಂದಕ್ಕೆ ಕಟ್ಟಿಕೊಂಡು ಜೋರಾಗಿ ಹಾಡು ಹೇಳಿಕೊಂಡು ತನ್ನಷ್ಟಕ್ಕೆ ಮಾತನಾಡಿಕೊಂಡು ಜೊತೆಗೆ ನಗುತ್ತಾ ರಸ್ತೆಯ ಉದ್ದಗಲಕ್ಕೂ ನಡೆದಾಡಿದರು.

ಕೊನೆಗೆ ಕಡಬ ಮೂಲದ ವ್ಯಕ್ತಿಯೋರ್ವರ ಪ್ಲವರ್ ಸ್ಟಾ ಲ್‍ ಗೆ ತೆರಳಿ 4 ಗುಲಾಬಿ ಹೂವುಗಳನ್ನು ಖರೀದಿಸಿದರು. ಈ ವೇಳೆ ಪೇಟೆಯಲ್ಲಿದ್ದ ಬೆರಳೆಣಿಕೆಯ ಜನತೆ ಹುಚ್ಚವೆಂಕಟೇಶ್ ಚಲನವಲನದ ಬಗ್ಗೆ ಸಂಶಯಿಸಿ ಕುತೂಹಲದಿಂದ ನೋಡತೊಡಗಿದರು. ಬಳಿಕ ಸ್ಥಳೀಯ ಹೊಟೇಲ್‍ಗೆ ಭೇಟಿ ನೀಡಿ ಬೆಳಗ್ಗಿನ ಉಪಹಾರವನ್ನು ಮುಗಿಸಿದರು. ಈತ ಎಡಕೈಯಲ್ಲಿ ತಿನ್ನುವುದನ್ನು ನೋಡಿದ ಜನತೆ ಈತ ಹುಚ್ಚಾವೆಂಕಟೇಶ್ ಅಲಲ್ವೇ? ಎಂದು ತುಳುವಿನಲ್ಲಿ ತಮ್ಮ ತಮ್ಮೊಳಗೆ  ಮಾತನಾಡಿ ಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ವೆಂಕಟೇಶ್ ಹೌದು ನಾನೇ ವೆಂಕಟೇಶ್ “ಎಂಚಾ ಉಲ್ಲಾರ್”ಎಂದು ತುಳುವಿನಲ್ಲಿ ನೆರೆದಿದ್ದ ಜನರನ್ನು ಕೇಳಿದರು.

Also Read  ರಸ್ತೆ ಕಾಮಗಾರಿ ಹಿನ್ನೆಲೆ- ಶಿರಾಡಿ ಘಾಟ್ ರಸ್ತೆ ಬಂದ್...!

ಹುಚ್ಚಾ ವೆಂಕಟೇಶ್ ಬಂದಿದ್ದಾರೆ ಎಂದು ಸುದ್ದಿ ತಿಳಿದು ಅಭಿಮಾನಿಗಳು ಆಗಮಿಸಿ ಸೆಲ್ಫಿಗೆ ಪ್ರಯತ್ನಿಸಿದರು. ಆದರೆ ವೆಂಕಟೇಶ್ ಸೆಲ್ಫಿಗೆ ನಿರಾಕರಿಸಿದ ಕಾರಣ ಬೆರಳೆಣಿಕೆ ಜನತೆಗೆ ಮಾತ್ರ ಅವಕಾಶ ಸಿಕ್ಕಿತ್ತು ಹಾಗೂ ಹೊಟೇಲ್‍ನ ಹೊರಗಡೆ ಪೋಟೋ ತೆಗೆಯಲು ಬರುತ್ತೇನೆ ಎಂದು ಅಭಿಮಾನಿಗಳಿಗೆ ಉತ್ತರಿಸಿದರು. ಇದೇವೇಳೆ ಹುಚ್ಚಾ ವಂಕಟೇಶನನ್ನು ಹೂಕೊಟ್ಟು ಸ್ವಾಗತಿಸಬೇಕು ಎಂದು ನಿರ್ಧರಿಸಿ ಹೋಟೇಲ್‍ನ ಹೊರಗಡೆ ಅಭಿಮಾನಿಗಳು ಕಾದುಕುಳಿತಿದ್ದರು.

ಆದರೆ ವೆಂಕಟೇಶ್ ಚಾಹ ಕುಡಿಯುವಲ್ಲಿಯೇ ಬಿಲ್ ಪಾವತಿಸಿ ಅಭಿಮಾನಿಗಳನ್ನು ಲೆಕ್ಕಿಸದೆ ಸುಮಾರು 300 ಮೀಟರ್ ದೂರದಲ್ಲಿದ್ದ ತನ್ನ ಕಾರಿನ ಬಳಿಗೆ ಓಡಿದರು. ಈ ವೇಳೆ ಜನತೆ ಹಿಂಬಾಲಿಸಿಕೊಂಡು ಎಷ್ಟೇ ಕರೆದರು ಕ್ಯಾರೇ ಮಾಡದೆ ಕಾರಿನಲ್ಲಿ ಕುಳಿತು ಪ್ರಯಾಣ ಮುಂದುವರಿಸಿದರು. ಹದಿನೈದು ದಿನಗಳ ಹಿಂದೆಯು ವೆಂಕಟೇಶ್ ಆಲಂಕಾರಿಗೆ ತನ್ನ ಸ್ನೇಹಿತರ ಜೊತೆ ಆಗಮಿಸಿ ಗ್ರಾಮ ಪಂಚಾಯತ್ ಬಳಿಯಲ್ಲಿರುವ ಹೊಟೇಲ್ ಒಂದರಲ್ಲಿ ಉಪಹಾರ ಮುಗಿಸಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

Also Read  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಗೆ ಕೊರೋನಾ ಪಾಸಿಟಿವ್

error: Content is protected !!
Scroll to Top