► Breaking News ಪಂಜ: ಮರ ಕಡಿಯುತ್ತಿದ್ದ ವೇಳೆ ಅಡಿಕೆ ಮರ ಮೈಮೇಲೆ ಬಿದ್ದು ಓರ್ವ ಮೃತ್ಯು ► ಕಾಯಂಬಾಡಿ ದೇವಸ್ಥಾನದ ಜೀರ್ಣೋದ್ಧಾರದ ಶ್ರಮದಾನದ ವೇಳೆ ದುರ್ಘಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.21. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮದಾನ ಮಾಡುತ್ತಿದ್ದಾಗ ಅಡಿಕೆ‌ ಮರ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಠಾಣಾ ವ್ಯಾಪ್ತಿಯ ಪಂಜ ಸಮೀಪದ ಕಾಯಂಬಾಡಿ ಎಂಬಲ್ಲಿ ಶುಕ್ರವಾರದಂದು ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕೇನ್ಯ ಗ್ರಾಮದ ಕಾಯಂಬಾಡಿ ನಿವಾಸಿ ಚೆನ್ನಪ್ಪ ಗೌಡ(60) ಎಂದು ಗುರುತಿಸಲಾಗಿದೆ. ಕಾಯಂಬಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಮರ ಕಡಿಯುತ್ತಿದ್ದ ವೇಳೆ ಮರ ಅಡಿಕೆ ಮರಕ್ಕೆ ಬಿದ್ದು, ಅಡಿಕೆ ಮರ ಚೆನ್ನಪ್ಪ ಗೌಡ ಎಂಬವರ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಚೆನ್ನಪ್ಪ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ► ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಒಕ್ಕೂಟ ಜನಜಾಗೃತಿ ವೇದಿಕೆಯಲ್ಲಿ ಒಮ್ಮತದ ತೀರ್ಮಾನ

 

error: Content is protected !!
Scroll to Top