ಬಜಪೆ: ಕುಖ್ಯಾತ ಸರಗಳ್ಳನ ಬಂಧನ ► ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರೇ ಈತನ ಟಾರ್ಗೆಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22. ಕುಖ್ಯಾತ ಸಸರ ಕಳ್ಳನನ್ನು ಬಂಧಿಸಿರುವ ಬಜಪೆ ಠಾಣಾ ಪೊಲೀಸರು ಆರೋಪಿಯಿಂದ ಕಳವು ಮಾಡಲಾಗಿದ್ದ ಎರಡು ಚಿನ್ನದ ಸರ ಹಾಗೂ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ.

 

ಬಂಧಿತ ಆರೋಪಿಯನ್ನು ಪಡೀಲ್ ಕತ್ತಲ್ ಸಾರ್ ನಿವಾಸಿ ರುಕ್ಮಯ್ಯ ಗೌಡ ಎಂಬವರ ಪುತ್ರ ತಿಲಕ್(27) ಎಂದು ಗುರುತಿಸಲಾಗಿದೆ. ಡಿಸೆಂಬರ್ 11 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಎರಮೆ ಎಂಬಲ್ಲಿ ಶ್ರೀಮತಿ ಪುಷ್ಪಾ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಕಪ್ಪು ಬಣ್ಣದ ಸ್ಕೂಟರಿನಲ್ಲಿ ಬಂದ ಆರೋಪಿಯು ಕುತ್ತಿಗೆಗೆ ಕೈ ಹಾಕಿ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದನಲ್ಲದೆ, ಡಿಸೆಂಬರ್ 17 ರಂದು ಕೊಳಂಬೆ ಗ್ರಾಮದ ಹೊಯಿಗೆಪದವು ನಿವಾಸಿ ಕು.ಅಕ್ಷತಾರವರು ಎಂಬಾಕೆ ತನ್ನ ಸಹೋದರಿಯೊಂದಿಗೆ ಕಜೆಪದವು ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Also Read  ಕಡಬ ಬಿಜೆಪಿ ಮಹಾ ಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಆಯ್ಕೆ ➤ ಅಧ್ಯಕ್ಷರಾಗಿ ಗಿರೀಶ್ ಎ.ಪಿ., ಕಾರ್ಯದರ್ಶಿಯಾಗಿ ಮಧುಸೂದನ್ ಕೊಂಬಾರು

ಒಂದೇ ತಿಂಗಳಲ್ಲಿ ಎರಡು ಸರ ಅಪಹರಣ ಪ್ರಕರಣದ ಆರೋಪಿಯ ಪತ್ತೆಗೆ ಬಲೆ ಬೀಸಿದ್ದ ಪೊಲೀಸರಿಗೆ ಸರ ಅಪಹರಣ ಮಾಡಿದ ವ್ಯಕ್ತಿಯನ್ನೇ ಹೋಲುವ ವ್ಯಕ್ತಿಯೊಬ್ಬ ಮೂಡುಪೆರಾರ ಗ್ರಾಮದ, ಬಲವಂಡಿ ದೈವಸ್ಥಾನ ರಸ್ತೆ ಬಳಿ ಕಂಡು ಬಂದಿದ್ದು, ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಯನ್ನು ನಡೆಸಿ ಆರೋಪಿಯಿಂದ ಕಳವು ಮಾಡಿರುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಟಿ.ಆರ್. ಸುರೇಶ್ ರವರ ಆದೇಶದಂತೆ ಉಪ ಪೊಲೀಸ್ ಆಯುಕ್ತರಾದ ಶ್ರೀ ಹನುಮಂತರಾಯ(ಕಾ ಮತ್ತು ಸು), ಶ್ರೀಮತಿ ಉಮಾ ಪ್ರಶಾಂತ್(ಅ ಮತ್ತು ಸ) ರವರ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಮಂಜುನಾಥ ಶೆಟ್ಟಿಯವರ ನಿರ್ದೇಶನದಂತೆ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವ ಮೂರ್ತಿ., ಪೊಲೀಸ್ ಉಪನಿರೀಕ್ಷಕರಾದ ಶಂಕರ ನಾಯರಿ, ಸಿಬ್ಬಂದಿಗಳಾದ ಪ್ರಕಾಶ್ ಮೂರ್ತಿ, ಚಂದ್ರಮೋಹನ್., ಪ್ರೇಮಾನಂದ, ಶಶಿಧರ, ಲಕ್ಷ್ಮಣ ಕಾಂಬ್ಳೆ, ಮುತ್ತಣ್ಣ ಶಿರಗ, ಹೇಮಂತ ಗೌಡ, ಉಮೇಶ್, ಕಿರಣ್ ಕುಮಾರ್ ರವರು ಭಾಗವಹಿಸಿದ್ದರು.

Also Read  ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಸಫಿಯಾ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ

error: Content is protected !!
Scroll to Top