ತನ್ನ ಯಾತ್ರೆಯ ಮೂಲಕ ಕ್ರಿಸ್‍ಮಸ್ ಸಂದೇಶ ಸಾರುವ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ► 19 ನೇ ವರ್ಷದ ಸಾಂತಾಕ್ಲಾಸ್ ಯಾತ್ರೆಗೆ ಚಾಲನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ , ಡಿ.20 ಸಾಂತಕ್ಲಾಸ್ ಯಾತ್ರೆಯ ಖ್ಯಾತಿಯ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ಅವರ 19 ನೇ ವರ್ಷದ ಸಾಂತಾಕ್ಲಾಸ್ ಯಾತ್ರೆಗೆ ಬುಧವಾರದಂದು ನೆಲ್ಯಾಡಿಯಲ್ಲಿ ಚಾಲನೆಯನ್ನು ನೀಡಲಾಯಿತು. ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಇವರು ಗ್ರಾ.ಪಂ. ಪರವಾಗಿ  ಶಾಲು ಹೊದೆಸಿ ಗೌರವಿಸಿ , ಇವರ 5 ದಿನದ ಸಾಂತಾಕ್ಲಾಸ್ ಯಾತ್ರೆಯನ್ನು ಉದ್ಘಾಟಿಸಿದರು.

ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಇಬ್ರಾಹಿಂ, ನೆಲ್ಯಾಡಿ ತಾ.ಪಂ. ಸದಸ್ಯೆ ಉಷಾ ಅಂಚನ್ , ನೆಲ್ಯಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುಳಾ ಎನ್.,ಮತ್ತು ನೆಲ್ಯಾಡಿ ಗ್ರಾ.ಪಂ. ನ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು. ಗಿಡಮರ ಬೆಳೆಸಿ, ಪರಿಸರವನ್ನು ಉಳಿಸಿ ಎನ್ನುವ ಸ್ಲೋಗನ್ ಅನ್ನು ಪೋಸ್ಟರ್ ಮೂಲಕ ತನ್ನ ವಾಹನದಲ್ಲಿರಿಸಿ ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಸಂದೇಶದ ಜೊತೆಗೆ ಪರಿಸರ ಕಾಳಜಿಯನ್ನು ವಿಶೇಷವಾಗಿ ವ್ಯಕ್ತಪಡಿಸಿರುವ ಕೊಕ್ಕಡದ ಸಾಂತಾಕ್ಲಾಸ್ ವಿನ್ಸೆಂಟ್ ಮಿನೇಜಸ್ ರವರಿಗೆ  ಗ್ರಾ.ಪಂ. ಮತ್ತು ಊರವರ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು.

Also Read  ಅರಂತೋಡು: ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

error: Content is protected !!
Scroll to Top