ಜಿಲ್ಲೆಯ ಚರಿತ್ರೆ ಹೇಳುವ ಛಾಯಾಚಿತ್ರ ನಿಮ್ಮಲ್ಲಿದೆಯೇ ? ► ಛಾಯಾಚಿತ್ರ ಪ್ರದರ್ಶನಕ್ಕೆ ಸುವರ್ಣಾವಕಾಶ

(ನ್ಯೂಸ್ ಕಡಬ) newskadaba.com  ಮಂಗಳೂರು, ಡಿ . 21 .  ದ.ಕ ಜಿಲ್ಲಾ ಕರಾವಳಿ ಉತ್ಸವದ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಮಂಗಳೂರು ವತಿಯಿಂದ ‘ಚರಿತ್ರೆ ಹೇಳುವ ಚಿತ್ರಗಳು’ ಶೀರ್ಷಿಕೆಯ ಹಳೆಯ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಸದ್ರಿ ಪ್ರದರ್ಶನ ಡಿಸೆಂಬರ್ 22, 23, 24 ರಂದು ಕದ್ರಿ ಉದ್ಯಾನವನದಲ್ಲಿ ಸಂಜೆ ಗಂಟೆ 4 ರಿಂದ 9ರವರೆಗೆ ನಡೆಯಲಿದ್ದು, ಸಂಗ್ರಹಗಳಲ್ಲಿರುವ ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶಿಸಲು ಅವಕಾಶವಿದೆ. ಆಸಕ್ತರು ತಮ್ಮ ಹೆಸರು ಮತ್ತು ವಿಳಾಸದೊಂದಿಗೆ ಛಾಯಾಚಿತ್ರವನ್ನು ಮೇಲ್ ಮಾಡಬಹುದು. ಅಥವಾ ವೈಯಕ್ತಿಕವಾಗಿ ತಲುಪಿಸಬಹುದು. ಹೆಚ್ಚಿನ ವಿವರಗಳಿಗಾಗಿ 9243300414, nisargamangalore@gmail.com ಸಂಪರ್ಕಿಸಬಹುದು. ಸ್ವಾತಂತ್ರ್ಯಪೂರ್ವ ಸಾಹಿತ್ಯಕ್ಕೆ ಕರಾವಳಿಯ ಕೊಡುಗೆಯ ಮಾಹಿತಿಯು ಲಭ್ಯವಿರುತ್ತದೆ. ಎಂದು ಪ್ರಕಟಣೆ ತಿಳಿಸಿದೆ.

Also Read  ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿದ ದಂಪತಿ

error: Content is protected !!
Scroll to Top