ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನದ ಹಿನ್ನೆಲೆ ► ದೀಪಾಲಂಕಾರ, ಶಾಮಿಯಾನ ಮತ್ತು ಪೀಠೋಪಕರಣಗಳಿಗೆ ಟೆಂಡರ್ ಆಹ್ವಾನ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20.  ಕದ್ರಿ ಉದ್ಯಾನವನದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ದಿವಸಗಳಿಗೆ ದೀಪಾಲಂಕಾರಗಳ ವ್ಯವಸ್ಥೆ ಕಲ್ಪಿಸಲು ಹಾಗೂ  ಶಾಮಿಯಾನ ಮತ್ತು  ಪೀಠೋಪಕರಣಗಳ ವ್ಯವಸ್ಥೆ ಕಲ್ಪಿಸಲು ದ್ವಿ ಲಕೋಟೆ ಪದ್ದತಿಯಲ್ಲಿ ಟೆಂಡರನ್ನು ಆಹ್ವಾನಿಸಲಾಗಿದೆ.ಟೆಂಡರ್ ಫಾರಂ ಅನ್ನು ಡಿಸೆಂಬರ್ 18 ರಿಂದ ದಿನಾಂಕ 14-01-2019 ಬೆಳಿಗ್ಗೆ 11 ಗಂಟೆಯ ವರೆಗೆ ಪಡೆಯಬಹುದಾಗಿದೆ ಹಾಗೂ ಭರ್ತಿ ಮಾಡಿದ ಟೆಂಡರನ್ನು ಸಲ್ಲಿಸಲು ಕೊನೆಯ ದಿನ  ಜನವರಿ 14 ಅಪರಾಹ್ನ ಗಂಟೆ 4 ಆಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ರಾಜ್ಯವಲಯ, ಬೆಂದೂರು ಕ್ರಾಸ್, ಮಂಗಳೂರು ಇಲ್ಲಿ ಸಂಪರ್ಕಿಸಲು ಕೋರಿದೆ. ದೂರವಾಣಿ ಸಂಖ್ಯೆ 0824-2444298/ 0824-2423628 ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಮಹಿಳೆಯರ ದೂರುಗಳಿಗೆ ತ್ವರಿತ ಸ್ಪಂದಿಸಲು 'ಪಿಂಕ್ ಗ್ರೂಪ್' ರಚನೆ: ಡಾ.ಪಿ.ಎಸ್.ಹರ್ಷ ➤ ಬ್ರ್ಯಾಂಡ್ ಮಂಗಳೂರು ಅಂಗವಾಗಿ ಮಾದಕ ದ್ರವ್ಯ, ಸೈಬರ್ ಕ್ರೈಂ ವಿರುದ್ಧ ಅಭಿಯಾನ

 

error: Content is protected !!
Scroll to Top