ಆಡಳಿತ ಪಕ್ಷದ ವಿರುದ್ದವೇ ಸ್ಪೀಕರ್ ರಮೇಶ್ ಕುಮಾರ್ ಗರಂ ► ಕಾರಣವೇನು ಗೊತ್ತೇ?

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 19.ಆಡಳಿತ ಪಕ್ಷದ ಸದಸ್ಯರ ವಿರುದ್ದವೇ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಗರಂ ಆಗಿದ್ದಾರೆ.ಮಂಗಳವಾರದಂದು ಪೂರಕ ಬಜೆಟ್‌ ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾತ್ಯಾಗ ಮಾಡುವ ನಿರ್ಧಾರ ಪ್ರಕಟಿಸಿದ ನಂತರ ಬಿಜೆಪಿ ಸದಸ್ಯರು ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಬೇಕು ಎಂದು  ಆಡಳಿತ ಪಕ್ಷವನ್ನು ಕೇಳಿದರು.

 ಆಗ ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದಾಗ ನಿಮಗೆ ನಾವು  ಮತ್ತೇಕೆ ಉತ್ತರ ಕೊಡಬೇಕು ಎಂದು ಹೇಳುತ್ತಾ ಗೋವಿಂದಾ ಗೋವಿಂದ.. ಎಂದು ಕೂಗಲು ಆರಂಭಿಸಿದರು. ಆಡಳಿತ ಪಕ್ಷದ ಸದಸ್ಯರು ಗೋವಿಂದಾ ಗೋವಿಂದ ಎಂದಿದ್ದಕ್ಕೆ ಸಭಾಧ್ಯಕ್ಷ ರಮೇಶ್‌ಕುಮಾರ್‌ ತುಸು ಗರಂ ಆಗಿ ‘ಏನ್ರಪ್ಪಾ ಇವತ್ತು ವೈಕುಂಠ ಏಕಾದಶೀನಾ? ಗೋವಿಂದಾ..ಗೋವಿಂದ ಎಂದು ಹೇಳ್ತಾ ಇದ್ದೀರಾ?’ ಎಂದು  ಆಕ್ರೋಶ ವ್ಯಕ್ತಪಡಿಸಿದರು.

Also Read  ಮಂತ್ರಿಗಳೊಂದಿಗೆ ಗ್ರಾಮಸ್ಥರ ಸಂವಾದ ➤ ಶಾಸಕ ಎಸ್. ಅಂಗಾರ, ಉಸ್ತುವಾರಿ ಸಚಿವರು ಭಾಗಿ

error: Content is protected !!
Scroll to Top