ಶಕ್ತಿ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ ► ಮಾನಸಿಕ ಹಾಗೂ ಶಾರೀರಿಕ ದೃಢತೆಗಾಗಿ ಆಟೋಟಗಳಲ್ಲಿ ನಿತ್ಯ ಪಾಲ್ಗೊಳ್ಳಿ – ದಿನೇಶ್ ಕುಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18.ಒಂದು ಆರೋಗ್ಯಕರ ದೇಹದಲ್ಲಿ ಆರೋಗ್ಯಯುಕ್ತ ಮನಸ್ಸು ಅಡಗಿರುತ್ತದೆ ಎಂಬುದು ಸುಳ್ಳಲ್ಲ. ನೀವು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದಿದ್ದರೆ, ಸಾಧನೆಯ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಾದರೆ ಓದಿನೊಂದಿಗೆ ದೈಹಿಕ ವ್ಯಾಯಾಮ ಅತ್ಯಗತ್ಯ. ಆಟ-ಪಾಠ ಎರಡೂ ವಿಷಯಗಳಿಗೆ ಸಮಾನ ಆದ್ಯತೆ ನೀಡಿ ನಿಮ್ಮ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ನಾಡಿನ ಹೆಸರಾಂತ ಕ್ರೀಡಾ ತರಬೇತುದಾರ, ಕಸ್ಟಮ್ಸ್ ಇಲಾಖೆಯ ಅಧೀಕ್ಷಕ ದಿನೇಶ್ ಕುಂದರ್ ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಹೇಳಿದರು.

ಕೆನರಾ ಪ್ರೌಢ ಶಾಲೆ ಉರ್ವಾದ ಶಾರೀರಿಕ ಶಿಕ್ಷಣ ಶಿಕ್ಷಕ ದಯಾನಂದ ಮಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿಗಳಾಗಿರುವ ಸಗುಣ ಸಿ. ನಾೈಕ್, ಶ್ರೀ ಗೋಪಲಕೃಷ್ಣ ದೇವಸ್ಥಾನದ ಟ್ರಸ್ಟಿ ಶ್ರೀ ಕೆ.ಸಿ ನಾೈಕ್, ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಪ್ರಧಾನ ಸಲಹೆಗಾರ ರಮೇಶ್ ಕೆ, ಶ್ರೀ ಗೋಪಾಲಕೃಷ್ಣ ಪ್ರಿ ಸ್ಕೂಲಿನ ಮುಖ್ಯಸ್ಥೆ ನೀಮಾ ಸಕ್ಸೇನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್ ಸ್ವಾಗತಿಸಿ, ಶಾಲಾ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ ವಂದಿಸಿದರು.

Also Read  ಕಡಬ: ತಾಲೂಕಿನ ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ ಜ. 28ಕ್ಕೆ ನಿಗದಿ

error: Content is protected !!
Scroll to Top