ತೊಕ್ಕೊಟ್ಟು: ಪೊಲೀಸರ ಸೂಚನೆಯಂತೆ ರಸ್ತೆ ಬದಿ ಲಾರಿಯನ್ನು ನಿಲ್ಲಿಸಿದ ಚಾಲಕ ► ನೋಡ ನೋಡುತ್ತಿದ್ದಂತೆಯೇ ನಡೆಯಿತು ಭೀಕರ ಘಟನೆ ► ಓರ್ವ ಮೃತ್ಯು – ಸ್ಥಳೀಯರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.18. ಚಲಿಸುತ್ತಿದ್ದ ಲಾರಿಯನ್ನು ನಿಲ್ಲಿಸಲು ಸಂಚಾರಿ ಪೊಲೀಸರು ಸೂಚಿಸಿದ್ದರಿಂದ ಲಾರಿ ನಿಲ್ಲಿಸುವ ಸಂದರ್ಭದಲ್ಲಿ ಪಲ್ಟಿಯಾದ ಪರಿಣಾಮ ಕ್ಲೀನರ್ ಮೃತಪಟ್ಟ ಘಟನೆ ನಗರದ ಹೊರವಲಯದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೃತ ಕ್ಲೀನರ್‌ನನ್ನು ಶಿವಮೊಗ್ಗ ಮೂಲದ ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕೇರಳ ಕಡೆಗೆ ಕಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಟ್ರಾಫಿಕ್ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದ್ದು, ಅದರಂತೆ ಲಾರಿ ಚಾಲಕ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಯತ್ನಿಸುತ್ತಿದ್ದಾಗ ಲಾರಿಯ ಚಕ್ರವು ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಯ ಮೇಲಿನ ಕಾಂಕ್ರೀಟ್ ಸ್ಲಾಬ್ ಮೇಲೆ ಹತ್ತಿದೆ. ನೋಡ ನೋಡುತ್ತಿದ್ದಂತೆಯೇ ಭಾರ ತಾಳಲಾರದೆ ಸ್ಲಾಬ್ ಮುರಿದು ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಕ್ಲೀನರ್ ಲಾರಿಯ ಅಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದರೆ ಮೃತಪಟ್ಟಿದ್ದಾರೆ.

Also Read  ಶೀಘ್ರದಲ್ಲೇ ಪದವಿ ವಿದ್ಯಾರ್ಥಿಗಳಿಗೆ ಪರಿಷ್ಕøತ ವಾರ್ಷಿಕ ವೇಳಾಪಟ್ಟಿ ➤ ಮಂಗಳೂರು ವಿ.ವಿ.ಕುಲಸಚಿವ ಕೆ. ರಾಜುಮೊಗವೀರ 

ಘಟನೆಯ ಸಂಚಾರಿ ಪೊಲೀಸರು ಕಾರಣವೆಂದು ಆರೋಪಿಸಿ ಟ್ರಾಫಿಕ್ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸ್ಥಳೀಯ ನೂರಾರು ಮಂದಿ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು. ಕೊನೆಗೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

error: Content is protected !!
Scroll to Top