►► Live | ನೇರ ಪ್ರಸಾರ – ಕಡಬ: ಸೌಹಾರ್ದತಾ ಹಗ್ಗ ಜಗ್ಗಾಟ

(ನ್ಯೂಸ್ ಕಡಬ) newskadaba.com ಕಡಬ, ಡಿ.17. ಕಡಬ ಪೊಲೀಸ್ ಠಾಣೆ ಹಾಗೂ ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.)ನ ಆಶ್ರಯದಲ್ಲಿ ಕಡಬದ ಕದಂಬ ಆಟೋ, ಸಂಗಮ್ ಜೀಪು ಹಾಗೂ ಮಧುರಾ ವ್ಯಾನ್ ಚಾಲಕ – ಮಾಲಕರ ಸಂಘ ಹಾಗೂ ಮರ್ಧಾಳ ಆಟೋ ಚಾಲಕರ ಸಹಕಾರದೊಂದಿಗೆ ‘ಅಪರಾಧ ತಡೆ ಮಾಸಾಚರಣೆ – 2018’ ರ ಅಂಗವಾಗಿ ಸೌಹಾರ್ದ ಹಗ್ಗ ಜಗ್ಗಾಟ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಕಡಬದಲ್ಲಿ ನಡೆಯಿತು.

ಕಡಬ ಪೇಟೆಯ ಪಂಜ ಕ್ರಾಸ್ ಬಳಿಯಿಂದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವರೆಗೆ ‘ಅಪರಾಧ ತಡೆ ಜಾಗೃತಿ ಜಾಥಾ ನಡೆದ ಬಳಿಕ ದೇವಸ್ಥಾನದ ವಠಾರದಲ್ಲಿ ಸಮಾರಂಭದ ಉದ್ಘಾಟನೆ ನಡೆಯಿತು. ಹಗ್ಗ ಜಗ್ಗಾಟ ಸ್ಪರ್ಧೆಗೆ ಹತ್ತು ತಂಡಗಳು ಹೆಸರನ್ನು ನೋಂದಾಯಿಸಿದ್ದು, ಕ್ರೀಡಾಕೂಟದ ನೇರ ಪ್ರಸಾರವನ್ನು ವೀಕ್ಷಿಸಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.

error: Content is protected !!

Join the Group

Join WhatsApp Group