(ನ್ಯೂಸ್ ಕಡಬ) newskadaba.com ಮಂಗಳೂರು, ಡಿ .17. ಕೆ.ವಿ.ಟಿ ಮತ್ತು ಎಸ್‍ಡಿಸಿಎಲ್ ಸಂಸ್ಥೆಯು ಜೈ ಕೌಶಲ್ಯ ಜವಾನ್ ವೆಬ್‍ಸೈಟ್‍ನಲ್ಲಿ www.kaushalkar.com ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಿರುತ್ತಾರೆ. ಈ ತರಬೇತಿಯನ್ನು ಪಡೆಯಲು ಮಾಜಿ ಸೈನಿಕರು/ಅವಲಂಬಿತರು ಮತ್ತು ವೀರನಾರಿಯರು ಈ ವೆಬ್‍ಸೈಟ್‍ನಲ್ಲಿ ನೊಂದಣಿ ಮಾಡಬೇಕಾಗುತ್ತದೆ. ಹಾಗೆಯೇ ನೊಂದಣಿ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ.
ಜೈ ಕೌಶಲ್ಯ ಜವಾನ್(ಮಾಜಿ ಸೈನಿಕರಿಗೆ) 33 ರಿಂದ 50 ವಯಸ್ಸಿನವರೆಗೆ ಹಾಗೂ ವೀರನಾರಿಯರಿಗೆ ಮತ್ತು ಮಾಜಿ ಸೈನಿಕರ ವಿಧವೆಯವರಿಗೆ 18 ರಿಂದ 50 ವಯಸ್ಸಿನವರೆಗೆ, ಮಾಜಿ ಸೈನಿಕರ ಮತ್ತು ವಿಧವೆಯವರ ಅಂಗವಿಕಲ ಮಕ್ಕಳಿಗೆ 15 ರಿಂದ 50 ವಯಸ್ಸಿನವರೆಗೆ ತರಬೇತಿ ಪಡೆಯಲು ಅವಕಾಶವಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂಉಡುಪಿ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು/ಅವಲಂಬಿತರು/ವೀರನಾರಿಯರು ಹಾಗೂ ಮಾಜಿ ಸೈನಿಕರ ಅಂಗವಿಕಲ ಮಕ್ಕಳು ತರಬೇತಿಗಾಗಿ ಈ ಮೇಲೆ ನಮೂದಿಸಿರುವ ಜೈ ಕೌಶಲ್ಯ ಜವಾನ್ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆಯುವಂತೆ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರ ಪ್ರಕಟನೆ ತಿಳಿಸಿದೆ.