(ನ್ಯೂಸ್ ಕಡಬ) newskadaba.com ಮಂಗಳೂರು, ಡಿಸೆಂಬರ್, 17 . ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ತಮ್ಮ ಹುದ್ದೆಯಲ್ಲಿ ಸಲ್ಲಿಸಿದ ಅತ್ಯುನ್ನತ ಸೇವೆಯನ್ನು ಆಧರಿಸಿ ಮತ್ತು ಸರ್ಕಾರಿ ಕೆಲಸದಲ್ಲಿ ವಿನೂತನ ಸಾಧನೆ ಮಾಡಿ ಹೊಸ ಬದಲಾವಣೆಗೈದ ಸಾಧಕರನ್ನು ಗುರುತಿಸಿ ಸರ್ವೋತ್ತಮ ಪ್ರಶಸ್ತಿಯನ್ನು ಜನವರಿ 26 ರಂದು ನೀಡಲಾಗುತ್ತದೆ.

ಅದರಂತೆ 2018-19 ನೇ ಸಾಲಿನಲ್ಲಿ ಸರ್ವೋತ್ತಮ ಪ್ರಶಸ್ತಿಯನ್ನು ನೀಡುವರೇ ಆಸಕ್ತ ಅಧಿಕಾರಿ/ನೌಕರರು ತಮ್ಮ ಸಾಧನೆಗಳ ಕುರಿತು ಪ್ರಸ್ತಾವನೆಯನ್ನು ತಮ್ಮ ಮೇಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ದಿನಾಂಕ 10/01/2019 ರೊಳಗೆ ಸಲ್ಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ, ದ.ಕ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
