ದ.28 ಮಂಗಳೂರಿನಲ್ಲಿ ಯುವ ಕಾಂಗ್ರೇಸ್ ವತಿಯಿಂದ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.15.  ಬಿಜೆಪಿ ಬೆಂಬಲಿತ ನರೇಂದ್ರ ಮೋದಿ ಸರಕಾರದ ದುರಾಡಳಿತದ ವಿರುದ್ಧ ದ.28ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ತಿಳಿಸಿದ್ದಾರೆ.


ಅವರು ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದ.13ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ದೇಶದಲ್ಲಿ ಕಳೆದ ನಾಲ್ಕುವರೆ ವರ್ಷದಿಂದ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರಕಾರ ನಮ್ಮ ದೇಶವನ್ನು ದೀವಾಳಿತನದ ಅಂಚಿಗೆ ತಳ್ಳುತ್ತಿದೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಬ್ಯಾಂಕ್‍ಗಳು ದಿವಾಳಿಯಾಗುತ್ತಿದೆ. ದೇಶದಾದ್ಯಂತ ಜನರ ಕೈಯಲ್ಲಿ ಹಣವೂ ಇಲ್ಲ ದುಡಿಮೆಯೂ ಇಲ್ಲದಂತಾಗಿದೆ. ಬ್ಯಾಂಕ್‍ಗಳಿಂದ ಸಾಲಮಾಡಿ ಕೃಷಿ ಮಾಡಿದ ರೈತರ ಬೆಳೆಗಳಿಗೆ ಬೆಲೆ ಇಲ್ಲದೆ ಕೃಷಿಯೇ ಬೇಡವಾಗಿದೆ, ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದರೂ ಕೇಂದ್ರ ಸರಕಾರ 1 ರೂ.ಸಾಲ ಮನ್ನಾ ಮಾಡದೇ ರೈತರನ್ನುಕಣ್ಣೀ ರಲ್ಲಿ ಜೀವನ ಕಳೆಯುವಂತೆ ಮಾಡುತ್ತಿದೆ. ನಮ್ಮ ದೇಶದ ಪ್ರದಾನಿಗೆ ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನವೇ ಇಲ್ಲದಂತಾಗಿದ್ದು, ಬರೀ ವಿದೇಶ ಪ್ರಯಾಣದಲ್ಲಿ ಕಾಲಕಳೆಯುತ್ತಿದ್ದು ಬರೀ ಬಾಷಣ ಪ್ರಿಯರಾಗಿದ್ದಾರೆ, ದೇಶಕ್ಕೆ ಬರೀ ಸುಳ್ಳನ್ನೇ ಬಂಡವಾಳವಾಗಿ ನೀಡುತ್ತಿದ್ದಾರೆ. ಇವರ ಆಡಳಿತದಿಂದ ಭ್ರಮನಿರಸನ ಗೊಂಡಿರುವ ದೇಶದಾದ್ಯಂತ ಮತದಾರರು ಕಾಂಗ್ರೆಸ್‍ನತ್ತ ಮತ್ತೆ ಮುಖ ಮಾಡಿದ್ದು ಯುವ ಜನತೆ ಸಂಪೂರ್ಣ ದೇಶದ ಯುವ ನಾಯಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ. ಇದರ ಒಂದು ಭಾಗವಾಗಿ ಬರುವ ದ.28ರಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಯುವ ನಾಯಕರ ಮುಂದಾಳತ್ವದಲ್ಲಿ ದೇಶದ ಆರ್ಥಿಕ ನೀತಿ ಹಾಗೂ ಮೋದಿಯವರ ದುರಾಡಳಿತದ ವಿರುದ್ಧ ಜಿಲ್ಲಾದ್ಯಂತ ಮಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ನಮ್ಮ ಸುಳ್ಯ ಕ್ಷೇತ್ರದಾದ್ಯಂತ ಸಾವಿರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದು, ಈ ಕಡಬ ಭಾಗದಿಂದಲೂ ಅತೀ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಬೇಕೆಂದು ವಿನಂತಿಸಿಕೊಂಡ ಅವರು ಈ ಬಗ್ಗೆ ಪ್ರತಿ ಗ್ರಾ.ಪಂ.ಮಟ್ಟದಲ್ಲಿ ಯುವ ಕಾಂಗ್ರೆಸ್ ಸಮಿತಿಗಳನ್ನು ರಚಿಸಿಕೊಂಡು ಎಲ್ಲಾ ಗ್ರಾಮಗಳಿಂದಲೂ 25ಕ್ಕೂ ಕಡಿಮೆ ಇಲ್ಲದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.


ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಕಳೆದ 35 ವರ್ಷಗಳಿಂದ ಯುವಕ ಕಾಂಗ್ರೇಸ್ ಸದಸ್ಯನಾಗಿ ಪದಾಧಿಕಾರಿಯಾಗಿ ಎಲ್ಲರನ್ನೂ ಒಟ್ಟಾಗಿಸಿಕೊಂಡು ಈ ಕಡಬ ಬ್ಲಾಕ್‍ನಲ್ಲಿ ಕಾಂಗ್ರೆಸ್ ಬಲಿಷ್ಠವಾಗಲು ಶ್ರಮಿಸಿದ್ದೇನೆ. ಇದೇ ರೀತಿ ಈಗ ಯುವ ನಾಯಕರು ಪದಾಧಿಕಾರಿಗಳು ಈ ಭಾಗದ ಯುವಕರನ್ನು ಒಟ್ಟಾಗಿಸಿಕೊಂಡು ಯುವಕ ಕಾಂಗ್ರೇಸ್ ಬಲಿಷ್ಠವಾಗಿ ಕಡಬ ಬ್ಲಾಕ್ ಸೇರಿದಂತೆ ಜಿಲ್ಲೆಯಲ್ಲಿ ದೊಡ್ಡ ಪಕ್ಷವಾಗಿ ಬೆಳೆಯಲು ಕಾಂಗ್ರೆಸ್‍ನ ಯುವ ಸಮುದಾಯ ಮುಂದೆ ಬರಬೇಕು, ಇದಕ್ಕೆ ಯುವಕ ಕಾಂಗ್ರೇಸ್ ಪದಾಧಿಕಾರಿಗಳು ನಮ್ಮ ಸಲಹೆಗಳನ್ನು ಪಡೆದುಕೊಂಡು ಎಲ್ಲರನ್ನು ಕೂಡಿಸಿಕೊಂಡು ಪಕ್ಷಕ್ಕೆ ದುಡಿದರೆ ಯಾವುದೇ ಚುನಾವಣೆಯಲ್ಲಿ ನಮಗೆ ಸೋಲೆ ಇಲ್ಲ ಎಂದು ಸಲಹೆ ನೀಡಿದರು.
ಜಿಲ್ಲಾ ಯುವಕ ಕಾಂಗ್ರೇಸ್ ಕಾರ್ಯದರ್ಶಿ ಕಡಬ ಯುವಕ ಕಾಂಗ್ರೇಸ್ ಉಸ್ತುವಾರಿಯಾಗಿರುವ ಶರೀಪು ಕಂಠಿ ರವರು ಮಾತನಾಡಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಮಗೆ ಸೋಲೆ ಇಲ್ಲ. ನಾವು ಹಿರಿಯ ಕಾಂಗ್ರೇಸ್ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿದೆ. ಕಡಬ ಬ್ಲಾಕ್ ಮೊದಲಿಂದಲೂ ಕಾಂಗ್ರೇಸ್ ಪಕ್ಷದ ಒಂದು ಬಹು ದೊಡ್ಡ ಕೇಂದ್ರವಾಗಿದೆ. ಇಲ್ಲಿನ ಮತದಾರರು ಯಾವತ್ತು ಕಾಂಗ್ರೇಸ್ ದೂರ ಉಳಿದಿಲ್ಲ ಇಲ್ಲಿಯ ನಾಯಕರು ಪದಾಧಿಕಾರಿಗಳು ಪಕ್ಷ ಸಂಘಟನೆಯಲ್ಲಿ ನಿರಂತರ ಶ್ರಮಿಸುತ್ತಿರುವುದು ಇಲ್ಲಿ ಕಾಂಗ್ರೇಸ್ ಬಲವರ್ಧನೆಗೆ ಸಕಾರಣವಾಗಿದೆ ಎಂದ ಅವರು ನಾಡಿದ್ದು 28 ರ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ಸಾವಿರಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರು ಕಡಬ ತಾಲೂಕಿನಿಂದ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

Also Read  ಪುತ್ತೂರು: ಅನ್ಯಕೋಮಿನ ಯುವಕರ ಜೊತೆ ಯುವತಿಯರು ಪತ್ತೆ


ಡಾ| ರಘು ಮಾತನಾಡಿ, ಇತಿಹಾಸದೊಂದಿಗೆ ಜನಪರ ಕಾಳಜಿಯನ್ನಿಟ್ಟುಕೊಂಡು ದೇಶಾದ್ಯಂತ ಬಡ ಜನರ , ದೀನ ದಲಿತರ, ಅಲ್ಪಸಂಖ್ಯಾತರ ಒಳಿತಿಗಾಗಿ ನೂರಾರು ಯೋಜನೆಗಳನ್ನು ಹಾಕಿಕೊಂಡು ಎಲ್ಲಾ ಜಾತಿ ಧರ್ಮದವರನ್ನು ಮುಖ್ಯ ವಾಹಿನಿಗೆ ತಂದು ಆರ್ಥಿಕ ಸಬಳರನ್ನಾಗಿಸಿದ ಕೀರ್ತಿ ಕಾಂಗ್ರೇಸ್ ಪಕ್ಷದ್ದು ಆದರೆ ಕಳೆದ ನಾಲ್ಕುವರೆ ವರ್ಷದಿಂದ ಈ ದೇಶವನ್ನೇ ಅಧೋಗತಿಗೆ ತಳ್ಳಿದ ಕೀರ್ತಿ ನರೇಂದ್ರ ಮೋದಿ ಯವರಿಗೆ ಸಲ್ಲುತ್ತಿದ್ದು ಆರ್ಥಿಕವಾಗಿ ನಮ್ಮ ದೇಶ ತೀರಾ ಹಿನ್ನಡೆ ಸಾಧಿಸಿದೆ ಎಂದು ದೂರಿದ ಅವರು ಯುವ ನಾಯಕರು ಕಾರ್ಯಕರ್ತರು ಈ ದೇಶದ ರಕ್ಷಣೆಗೆ ಪಣತೊಡಬೇಕಾಗಿದೆ. ಪ್ರತೀ ಗ್ರಾಮದಿಂದ ಕಾರ್ಯಕರ್ತರು ಸಜ್ಜಾಗುವ ಮೂಲಕ ಕಾಂಗ್ರೇಸ್ ಬಲಿಷ್ದಗೊಳಿಸಬೇಕೆಂದರು.
ಯುವ ಕಾಂಗ್ರೇಸ್ ಮುಂದಾಳು ಯತೀಶ್ ಗೌಡ ಬಾನಡ್ಕ ಮಾತನಾಡಿ ಕಾಂಗ್ರೇಸ್ ಪಕ್ಷದ ಯುವಕರು ಪಕ್ಷದ ಬಂಡವಾಳವಾಗಿದ್ದು ಯುವಕರೆಲ್ಲ, ಒಟ್ಟಾಗಿ ಪ್ರಾಮಾಣಿಕತೆಯಿಂದ ಶ್ರಮಿಸಿದಲ್ಲಿ, ಕಾಂಗ್ರೇಸ್‍ಗೆ ಜಯ ಖಂಡಿತ ಎಂದ ಅವರು ನಾವು ಪ್ರತೀ ಗ್ರಾಮದಲ್ಲಿ ಯುವಕರನ್ನು ಸಂಘಟಿಸುವ ಕೆಲಸ ಆಗಬೇಕಿದೆ. ಈಗಾಗಲೇ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದ ನಮ್ಮ ಸಂಸದರು ಬರೇ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಸಂಸದರು ಇಲ್ಲಿ ಆಯ್ಕೆ ಆಗಿರುವುದೇ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದ್ದು ಮುಂದೆಂದೂ ಇಂತಹ ಸಂಸದರನ್ನು ಆಯ್ಕೆ ಮಾಡದಂತೆ ಮತದಾರರು ಎಚ್ಚರವಹಿಸಬೇಕಾಗಿದೆ ಎಂದರು.

Also Read  ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಸೂಚನೆ


ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ, ದ.28ರಂದು ಮಂಗಳೂರಿನಲ್ಲಿ ಜಿಲ್ಲಾಧ್ಯಕ್ಷ ಮಿಥುನ್ ರೈ ರವರ ನೇತೃತ್ವದಲ್ಲಿ ವಿಭಿನ್ನ ರೀತಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದ್ದು, ಕೇಂದ್ರ ಸರಕಾರದ ದುರಾಡಳಿತ ಹಾಗೂ ಆರ್ಥಿಕ ನೀತಿಯನ್ನು ಖಂಡಿಸುವುದಲ್ಲದೇ ಮೋದಿ ಸರಕಾರದ ದುರಾಡಳಿತವನ್ನು ಮತದಾರ ಬಾಂದವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದ ಅವರು ಕಳೆದ ನಾಲ್ಕುವರೆ ವರ್ಷದಿಂದ ಜನರನ್ನು ಮೋಸಗೊಳಿಸಿ ಸುಳ್ಳು ಭರವಸೆಗಳೊಂದಿಗೆ ಕಾಲಹರಣ ಮಾಡಿದ್ದೇ ಹೊರತು ಜನರಿಗಾಗಿ ಏನನ್ನು ಮಾಡಿಲ್ಲ. ಹಣಕಾಸಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ದೇಶವನ್ನೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಮೋದಿಯನ್ನು ಬೆಂಬಲಿಸಿದರೆ ನಮ್ಮ ದೇಶಕ್ಕೆ ಉಳಿಗಾಲವಿಲ್ಲ ಎಂಬುವುದನ್ನು ಅರಿತ ಮತದಾರರು ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಗೂ ದಿಕ್ಸೂಚಿಯಾಗಿದೆ. ನಮ್ಮ ಸುಳ್ಯ ಕ್ಷೇತ್ರದಲ್ಲಿ ಕೂಡಾ ಬೇರೆ ಬೇರೆ ರೀತಿಯ ಸುಳ್ಳನ್ನು ಹೇಳುವ ಮೂಲಕ ಮತದಾರರನ್ನು ಓಲೈಸಿ ಕಾಂಗ್ರೇಸ್ ಅಭ್ಯರ್ಥಿಗೆ ಸೋಲಾಗಿದೆ. ಇನ್ನು ಮುಂದೆ ಇಂತಹ ಸುಳ್ಳು ನಡೆಯುವುದಿಲ್ಲ, ಕಾಂಗ್ರೇಸ್ ಪಕ್ಷವೇ ನಮ್ಮ ರಕ್ಷಣೆಗೆ ಇರುವ ಪಕ್ಷವೆಂದು ಎಲ್ಲರಿಗೂ ಅರಿವಾಗಿದೆ ಎಂದರು.
ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ತಾ.ಪಂ.ಸದಸ್ಯೆ ಕೆ.ಟಿ.ವಲ್ಸಮ್ಮ, ಡಿಸಿಸಿ ಕಾರ್ಯದರ್ಶಿ ಎಚ್.ಕೆ.ಇಲಿಯಾಸ್, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರ.ಕಾರ್ಯದರ್ಶಿ ನಝೀರ್ ಮಾಂತೂರು, ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ವರ್ಗೀಸ್ ಅಬ್ರಾಹಂ, ಕಡಬ ಗ್ರಾಮ ಸಮಿತಿ ಯುವಕ ಕಾಂಗ್ರೇಸ್ ಅಧ್ಯಕ್ಷ ಫೈಝಲ್ ಎಸ್.ಇ.ಎಸ್., ಬಿಳಿನೆಲೆ ವಲಯ ಕಾಂಗ್ರೇಸ್ ಅದ್ಯಕ್ಷ ಮನಮೋಹನ ಗೋಳ್ಯಾಡಿ, ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಆದಂ ಎಚ್., ಕಾರ್ಯದರ್ಶಿ ಕ್ಷೇವಿಯರ್ ಬೇಬಿ, ಕಡಬ ವಲಯಾಧ್ಯಕ್ಷ ಅಶ್ರಫ್ ಶೇಡಿಗುಂಡಿ, ಡಿಸಿ ಸದಸ್ಯ ಎ.ಎಸ್.ಶೆರೀಪ್, ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿಗಳಾದ ಜೆ.ಕೆ.ಇಲಿಯಾಸ್, ರಿಯಾಝ್ ನಾಕೂರು, ಶಕೀರ್ ಮರ್ಧಾಳ, ಯುವ ಕಾಂಗ್ರೇಸ್ ಮುಂದಾಳು ಕಿಶೋರ್ ಹೊಳ್ಳಾರು, ಕಡಬ ವಲಯ ಕಾಂಗ್ರೇಸ್ ಪ್ರ.ಕಾರ್ಯದರ್ಶಿ ಶಾಲಿನಿ ಸತೀಶ್ ನಾೈಕ್, ತೋಮಸ್ ಇಡೆಯಾಳ, ಯುವಕ ಕಾಂಗ್ರೇಸ್ ಮುಂದಾಳು ತೇಜಸ್ ಪುತ್ತೂರು ವಿವಿಧ ಸಲಹೆ ಸೂಚನೆ ನೀಡಿದರು. ಬ್ಲಾಕ್ ಕಾಂಗ್ರೇಸ್ ಪದಾಧಿಕಾರಿಗಳು, ಸದಸ್ಯರು, ಯುವ ಕಾಂಗ್ರೇಸ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಪ್ರ.ಕಾರ್ಯದರ್ಶಿ ಸುದೀರ್ ದೇವಾಡಿಗ ಸ್ವಾಗತಿಸಿ, ವಂದಿಸಿದರು.

Also Read  ಕೈಕಂಬ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಪಾದಚಾರಿ ಗಂಭೀರ

ಪ್ರತೀ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಮಿತಿಗಳನ್ನು ರಚಿಸಿಕೊಂಡು 25 ಸದಸ್ಯರನ್ನೊಳಗೊಂಡ ಸಮಿತಿಯ ಮುಖಾಂತರ ಕಾರ್ಯನಿರ್ವಹಿಸಿದರೆ ಬ್ಲಾಕ್ ಮಟ್ಟದಲ್ಲಿ ಯುವಕ ಕಾಂಗ್ರೆಸ್ ದೊಟ್ಟ ಪಕ್ಷವಾಗಿ ಬೆಳೆಯುತ್ತದೆ ಮತ್ತು ಸುಲಭವಾಗಿ ಚುನಾವಣೆ ಗೆಲ್ಲಲು ಸಾಧ್ಯವಾಗಬಹುದು.
– ಪಿ.ಪಿ.ವರ್ಗೀಸ್ ಜಿ.ಪಂ.ಸದಸ್ಯರು ಕ್ಷೇತ್ರ ಕಡಬ

ದೇಶದ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯನ್ನು ವೀಕ್ಷಿಸಿದಾಗ ದೇಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷೆದ್ದು ಬರುವಂತೆ ಕಾಣುತ್ತದೆ. ಇದಕ್ಕೆ ನರೇಂದ್ರ ಮೋದಿಯವರ ಆಡಳಿತ ವೈಫ್ಯಲ್ಯವೇ ಸಾಕ್ಷಿಯಾಗಿದೆ.
– ಡಾ| ರಘು ಕೆಪಿಸಿಸಿ ಸದಸ್ಯರು.

ನಮ್ಮ ಇಂದಿನ ಪೂರ್ವಭಾವಿ ಸಭೆಗೆ ಜಿಲ್ಲಾಧ್ಯಕ್ಷ ಮಿಥುನ್ ರೈ ಬರಬೇಕಿತ್ತು. ಆದರೆ ಎ.ಐ.ಸಿ.ಸಿ.ಕಾರ್ಯದರ್ಶಿಯ ತುರ್ತು ಬುಲಾವ್‍ನಿಂದಾಗಿ ಅವರು ತೆರಳಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ದ.28ರಂದು ಮಿಥುನ್ ರೈ ಸಾರಥ್ಯದಲ್ಲಿ ಮಂಗಳೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕಿದೆ.
– ಫಝಲ್ ಕೋಡಿಂಬಾಳ

error: Content is protected !!
Scroll to Top