ಮೈಸೂರು: ದೇವಸ್ಥಾನದ ಪ್ರಸಾದ ತಿಂದು 12 ಮಂದಿ ಮೃತ್ಯು ► 80 ಕ್ಕೂ ಅಧಿಕ ಮಂದಿ ಆಸ್ವಸ್ಥ ► 60 ಕ್ಕೂ ಹೆಚ್ಚು ಕಾಗೆಗಳ ಸಾವು

(ನ್ಯೂಸ್ ಕಡಬ) newskadaba.com ಮೈಸೂರು, ಡಿ.15. ಜಿಲ್ಲೆಯ ಮಾರ್ತಳ್ಳಿ ಸಮೀಪದ ಕಿತ್ತಗುಚ್ಚಿ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ 12 ಮಂದಿ ಮೃತಪಟ್ಟು, 80 ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದು, ನಗರದ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಲ್ವಾಡಿಯ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಈ ಅವಘಡ ಸಂಭವಿಸಿದೆ. ಕಾರ್ಯಕ್ರಮದಲ್ಲಿ ಭಕ್ತರಿಗೆ ಹಂಚಿದ ಪ್ರಸಾದ ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಪ್ರಸಾದದಲ್ಲಿ ಜಮೀನಿಗೆ ಸಿಂಪಡಿಸುವ ಓಪಿ ಪಾಯ್ಸನ್ ಮಿಕ್ಸ್​ ಆಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪ್ರಸಾದವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಶಂಕಿತರನ್ನು ಚಾಮರಾಜನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ‌ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಸಿ.ಎಸ್.ಪುಟ್ಟರಾಜು ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Also Read  ಬಟ್ಟೆ, ಮೊಬೈಲ್, ಚಿನ್ನದಂಗಡಿ ಮುಚ್ಚುವಂತೆ ಸರಕಾರದಿಂದ ಸುತ್ತೋಲೆ ➤ ಕಡಬ ವ್ಯಾಪ್ತಿಯ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚುವಂತೆ ಎಸ್ಐ ರುಕ್ಮನಾಯ್ಕ್ ಮನವಿ

 

error: Content is protected !!
Scroll to Top