ಕುಬಲಾಡಿ: ಅಂಬೇಡ್ಕರ್ ಪರಿನಿರ್ಮಾಣ ದಿನ ಆಚರಣೆ ► ಕಾಯರಡ್ಕ – ಪೇರಡ್ಕ ರಸ್ತೆ ದುಸ್ತಿತಿ ಬಗ್ಗೆ ಪ್ರತಿಭಟನೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ.14.  ನೂಜಿಬಾಳ್ತಿಲ ಗ್ರಾಮದ ಕುಬಲಾಡಿ ಓಡಿ ಮುಗೇರ ರವರ ಮನೆಯಲ್ಲಿ ಅಂಬೇಡ್ಕರ್ ಪರಿನಿರ್ಮಾಣ ದಿನವನ್ನು ದ.9ರಂದು ಆಚರಿಸಲಾಯಿತು.

ದಲಿತ ಮುಖಂಡ ಗುರುವಪ್ಪ ಕಲ್ಲುಗುಡ್ಡೆ ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ವಿವರಿಸಿದರು. ಓಡಿ ಮುಗೇರ ರವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಭೆಯಲ್ಲಿ ದಲಿತ ಮುಖಂಡರು ಪೇರಡ್ಕ – ಕಾಯರಡ್ಕ ರಸ್ತೆಯ ದುಸ್ಥಿತಿ ಬಗ್ಗೆ ಪ್ರಸ್ತಾಪ ಮಾಡಿ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಭಾಗಕ್ಕೆ ಸಂಸದ ನಳೀನ್ ಕುಮಾರ್ ಯಾವುದೇ ಸೌಲಭ್ಯಗಳನ್ನು ದೊರಕಿಸಿಲ್ಲ ಎಂದು ಆರೋಪಿಸಿದ್ದಾರೆ. ರಸ್ತೆ ದುರಸ್ತಿಯಾಗದೇ ಇರುವ ಬಗ್ಗೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದಾಗಿ ತೀರ್ಮಾನಿಸಿದರು. ಈ ಸಂದರ್ಭದಲ್ಲಿ ಶೀನಪ್ಪ ಪಾಲೆತ್ತಡ್ಕ, ಕುಶಲ ದೋಂತಿಲಡ್ಕ, ರಾಜೇಶ್ ನಿಡ್ಡೋ, ಪಿಜಿನ ದೋಳ, ಮಣಿ ದೋಳ, ಕರುಣಾಕರ, ಪ್ರಕಾಶ್, ಗಂಗಾಧರ, ಸುಧಾಕರ, ಚಂದಪ್ಪ, ಸುಂದರ, ತನಿಯಪ್ಪ, ಕುಂಞಪ್ಪ ಗೋಳಿಯಡ್ಕ, ಅಕ್ಕು, ಪ್ರೀಯಾ, ಅಂಗಾರು, ಗುಲಾಬಿ, ಹರಿಣಿ ಉಪಸ್ಥಿತರಿದ್ದರು. ವಸಂತ ಕುಬಲಾಡಿ ಸ್ವಾಗತಿಸಿ, ವಂದಿಸಿದರು. ಬಾಬು ಕುಬಲಾಡಿ ಕಾರ್ಯಕ್ರಮ ನಿರೂಪಿಸಿದರು.

Also Read  ಮಂಗಳೂರು: ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ- ಆರೋಪಿ ಖಾಕಿ ಬಲೆಗೆ

error: Content is protected !!
Scroll to Top