ಕಡಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಡಿ.12. ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಡಿಸೆಂಬರ್ 02 ರಂದು ಕಡಬದಲ್ಲಿ ನಡೆದಿದ್ದು, ಈ ಬಗ್ಗೆ ಸಂಬಂಧಿಕರಲ್ಲೆಲ್ಲಾ ಹುಡುಕಾಡಿ ಎಲ್ಲೂ ಪತ್ತೆಯಾಗದಿದ್ದಾಗ ಬುಧವಾರದಂದು ಕಡಬ ಠಾಣೆಗೆ ದೂರು ನೀಡಲಾಗಿದೆ.

ನಾಪತ್ತೆಯಾದವರನ್ನು ಕಡಬ ತಾಲೂಕಿನ ಪಣೆಮಜಲು ನಿವಾಸಿ ರಮೇಶ್ (40) ಎಂದು ಗುರುತಿಸಲಾಗಿದೆ. ಡಿಸೆಂಬರ್ 02 ರಂದು ಮಧ್ಯಾಹ್ನದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಇವರನ್ನು ಹಲವೆಡೆ ಹುಡುಕಾಡಲಾಗಿದ್ದು, ಪತ್ತೆಯಾಗಿಲ್ಲ. ಈ ಬಗ್ಗೆ ಅವರ ಪತ್ನಿ ರತ್ನಾವತಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು; ಸುಳ್ಯದಲ್ಲಿ ಭಾರೀ ಪ್ರತಿಭಟನೆ

error: Content is protected !!
Scroll to Top