ಕಬಕ: 21 ವಯಸ್ಸಿನ ಯುವಕ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.10. ಇಲ್ಲಿನ ಕಬಕದ ಯುವಕನೋರ್ವ ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗಿನ ಜಾವ ಬೆಂಗಳೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಪುತ್ತೂರು ತಾಲೂಕಿನ ಕಬಕ ಸಮೀಪದ ಕೊಡಿಪ್ಪಾಡಿ ಬಳಿಯ ಅರ್ಕ ವಿದ್ಯಾಪುರ ನಿವಾಸಿ ಅಬೂಬಕರ್ ಎಂಬವರ ಪುತ್ರ ಸಿನಾನ್(21) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿದ್ದು, ಭಾನುವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಸೋಮವಾರ ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತದೇಹವನ್ನು ಊರಿಗೆ ತರುವ ಪ್ರಯತ್ನ ಸಾಗಿದೆ.

Also Read  ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇಲ್ಲದಿರುವುದು ಹಾಗು ಕೌಟಂಬಿಕ ಕಲಹಗಳು ಆಗುತ್ತಿದ್ದರೆ ಪೂಜೆ ಮಾಡುವಾಗ ಒಮ್ಮೆ ಈ ಮಂತ್ರ ಪಠಿಸಿ ಸಾಕು..!

error: Content is protected !!
Scroll to Top