ಬಲ್ಯ: ದೈವ ಚಾವಡಿಯ ತ್ರಿಶೂಲ ಕದ್ದು ರಸ್ತೆ ಬದಿಯಲ್ಲಿ ಹಾಕಿದ ಕಿಡಿಗೇಡಿಗಳು ► ತ್ರಿಶೂಲವನ್ನು ಸಂಬಂಧಿತರಿಗೆ ಹಸ್ತಾಂತರಿಸಿದ ಕಡಬ ಠಾಣಾ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಡಿ.09. ಇಲ್ಲಿಗೆ ಸಮೀಪದ ಬಲ್ಯ ಎಂಬಲ್ಲಿ ರಸ್ತೆ ಬದಿಯಲ್ಲಿ ಶನಿವಾರದಂದು ತ್ರಿಶೂಲವೊಂದು ಕಂಡುಬಂದಿದ್ದು, ಸ್ಥಳೀಯರೋರ್ವರು ಕಡಬ ಠಾಣೆಗೆ ಹಸ್ತಾಂತರಿಸಿದ್ದರು.

ತ್ರಿಶೂಲ ಸಿಕ್ಕಿರುವ ಬಗ್ಗೆ ಕಡಬ ಠಾಣಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗರವರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದ ಹಿನ್ನೆಲೆಯಲ್ಲಿ ತ್ರಿಶೂಲವು ಇಲ್ಲಿಗೆ ಸಮೀಪದ ಬಲ್ಯ ಪಡ್ನೂರು ರಾಜನ್ ದೈವ ಚಾವಡಿಯ ಬಳಿಯಲ್ಲಿದ್ದ ಗುಳಿಗ ಕಟ್ಟೆಯದ್ದೆಂದು ತಿಳಿದು ಬಂದಿದ್ದು, ತ್ರಿಶೂಲವನ್ನು ಯಾರೋ ಕಿಡಿಗೇಡಿಗಳು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಲ್ಯ ಪಡ್ನೂರು ರಾಜನ್ ದೈವ ಚಾವಡಿ ಸಮಿತಿಯ ಸದಸ್ಯರು ಭಾನುವಾರದಂದು ಕಡಬ ಠಾಣೆಗೆ ಮಾಹಿತಿ ನೀಡಿದ್ದು, ಅದರಂತೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಸದಸ್ಯರಿಗೆ ಹಸ್ತಾಂತರಿಸಿದರು.

Also Read  ಮತ್ತೆ ಕಾರ್ಯಾಚರಣೆಗೆ ಇಳಿದ ಭಜರಂಗದಳ..! ➤ ಟೆಂಪೊ ಅಡ್ಡಹಾಕಿ 4 ಕೋಣಗಳ ರಕ್ಷಣೆ

 

ಈ ಸಂದರ್ಭದಲ್ಲಿ ಪ್ರಮುಖರಾದ
ಪುರುಷೋತ್ತಮ ಗೌಡ ಪನ್ಯಾಡಿ, ರವೀಂದ್ರ ಆರಿಗ ಪಡ್ನೂರು, ಚಿತ್ತರಂಜನ್ ರೈ ಮಾಣಿಗ, ದೇವದಾಸ್ ಭಟ್ ಪಡ್ನೂರು, ಪೂರ್ಣೇಶ್ ಬಿ.ಎಂ. ಬಬ್ಲುಬೆಟ್ಟು, ಮೋಹನ್ ದೇರಾಜೆ, ಕೃಷಪ್ಪ ದೇವಾಡಿಗ ಸನಿಲ, ದೇವಯ್ಯ ಪನ್ಯಾಡಿ, ಚಂದ್ರಹಾಸ ಸಾಲ್ಯಾನ್, ಶೇಖರ್ ಪಡ್ನೂರು, ನಾರಾಯಣ ಸನಿಲ ಹಾಗೂ ನಾರಾಯಣ್ ಬಲ್ಯ ಕೊಲ್ಲಿಮಾರು ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top