ಕಡಬದ ಶೆರ್ಲಿ ಮನೋಜ್ ಜೇಸಿ ವಲಯ ತರಬೇತುದಾರರಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.27. ಇತ್ತೀಚೆಗೆ ಜೇಸಿಐ ಇಂಡಿಯಾವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಸಿದ ವಲಯ ತರಬೇತುದಾರರ ಕಮ್ಮಟದಲ್ಲಿ ಜೇಸಿಐ ಉಡುಪಿ-ಇಂದ್ರಾಳಿಯ ಅಧ್ಯಕ್ಷೆ, ಮಣಿಪಾಲದ ಶೆಫಿನ್ಸ್‌ ಸಮೂಹದ ಸಹ ನಿರ್ದೇಶಕಿ, ಕಡಬ ಇಚಿಲಂಪಾಡಿಯ ಥಾಮಸ್ ರವರ ಪುತ್ರಿ ಶ್ರೀಮತಿ ಶೆರ್ಲಿ ಮನೋಜ್ ರವರು ವಲಯ ತರಬೇತುದಾರರಾಗಿ ಮೂಡಿ ಬಂದಿದ್ದಾರೆ.

ಇವರು ಮೂಲತಃ ಕಡಬದ ಕಳಾರ ನಿವಾಸಿ ಮನೋಜ್ ಪಿ.ಯಂ.ರವನ್ನು ವರಿಸಿ ಸುಮಾರು 29 ವರ್ಷಗಳಿಂದ ಉಡುಪಿಯ ಮಣಿಪಾಲದಲ್ಲಿ ನೆಲೆಸಿರುತ್ತಾರೆ. ಪ್ರಸಕ್ತ ಜೇಸಿಯ ವಲಯಾಧಿಕಾರಿಯಾಗಿರುವ ಇವರು ಉಡುಪಿ ಪರಿಸರದಲ್ಲಿ ಮತ್ತು ಜೇಸಿ ವಲಯದಲ್ಲಿ ‘ಮನೋಜ್ ಕಡಬ’ ಎಂದೇ ಖ್ಯಾತಿ ಹೊಂದಿರುತ್ತಾರೆ.

Also Read  ಕಡಬ ತಾಲೂಕಿನ ವಿವಿಧೆಡೆ ಅತಂತ್ರರಾಗಿದ್ದ ಕಾರ್ಮಿಕರು ಮರಳಿ ಹುಟ್ಟೂರಿಗೆ ➤ 7 ಬಸ್ ಗಳಲ್ಲಿ ಊರಿಗೆ ಮರಳಿದ 196 ವಲಸೆ ಕಾರ್ಮಿಕರು

error: Content is protected !!
Scroll to Top