ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕುಟ್ರುಪಾಡಿ ಗ್ರಾಮ ಸಮಿತಿ ರಚನೆ ► ಅಧ್ಯಕ್ಷರಾಗಿ ಮೇದಪ್ಪ ಗೌಡ, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆಯ ವಿಜಯ ಕುಮಾರ್

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕುಟ್ರುಪಾಡಿ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು, ಅಧ್ಯಕ್ಷರಾಗಿ ಮೇದಪ್ಪ ಗೌಡ ನವದುರ್ಗ ಮತ್ತು ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರುಗಳಾಗಿ ಕುಂಞಪ್ಪ ಗೌಡ ಕೊಡೆಂಕಿರಿ, ಕುಶಾಲಪ್ಪ ಗೌಡ ಬಜೆತ್ತಡ್ಕ, ತಿಮ್ಮಪ್ಪ ಗೌಡ ಕೆಳಗಿನ ಮನೆ, ಮೋನಪ್ಪ ಗೌಡ ನಾಡೋಳಿ, ಉಪಾಧ್ಯಕ್ಷರುಗಳಾಗಿ ಆನಂದ ಗೌಡ ಉಳಪ್ಪು, ಪುಟ್ಟಣ್ಣ ಗೌಡ ಹೊಸ್ಮಠ, ಚಿದಾನಂದ ಕೊಡೆಂಕಿರಿ, ಗುಡ್ಡಪ್ಪ ಗೌಡ, ಖಜಾಂಜಿಯಾಗಿ ಪ್ರಶಾಂತ್ ಗೌಡ ಉಳಿಪ್ಪು ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಾಲಕೃಷ್ಣ ಗೌಡ ಬಳ್ಳಿತ್ತಡ್ಡ, ಗಂಗಾಧರ ಗೌಡ ಹಳ್ಳಿ, ರವಿಚಂದ್ರ ನಾಲೂರು, ಜಿತೇಶ್ ಗೌಡ ನಾಲೂರು, ಸುರೇಶ್ ಗೌಡ ಕಾಡುತೋಟ, ಮೋಹನ ಗೌಡ ಕೆಳಗಿನ ಮನೆ ಮಠ, ಸುಂದರ ಗೌಡ ಪಡ್ಯೋಲ್ಪು, ದಯಾನಂದ ಗೌಡ ಉಳಿಪ್ಪು ಆಯ್ಕೆಯಾಗಿದ್ದಾರೆ.

ಕುಟ್ರುಪಾಡಿ 1ನೇ ವಾರ್ಡ್ ಸಮಿತಿಯ ಅಧ್ಯಕ್ಷರಾಗಿ ಮೋಹನ ಗೌಡ ಕೆರೆಕೋಡಿ, ಕಾರ್ಯದರ್ಶಿಯಾಗಿ ಗಂಗಾಧರ ಗೌಡ ಹಳ್ಳಿಮನೆ, 2ನೇ ವಾರ್ಡ್ ಅಧ್ಯಕ್ಷರಾಗಿ ಚಿದಾನಂದ ಗೌಡ ಕೊಡೆಂಕಿರಿ, ಕಾರ್ಯದರ್ಶಿಯಾಗಿ ರವಿಚಂದ್ರ ಗೌಡ ನಾಲೂರು, 3ನೇ ವಾರ್ಡ್ ಅಧ್ಯಕ್ಷರಾಗಿ ಹೊನ್ನಪ್ಪ ಗೌಡ ಪಾನಗ, ಕಾರ್ಯದರ್ಶಿಯಾಗಿ ಧನಂಜಯ ಗೌಡ ಬರೆಮೇಲು, 4ನೇ ವಾರ್ಡ್ ಅಧ್ಯಕ್ಷರಾಗಿ ಪ್ರಶಾಂತ ಗೌಡ ಉಳಿಪ್ಪು, ಕಾರ್ಯದರ್ಶಿಯಾಗಿ ಸುರೇಶ್ ಗೌಡ ಉಳಿಪ್ಪು ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯು ಕಡಬ ವಲಯ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

Also Read  ಪುತ್ತೂರು ಕ್ಷೇತ್ರದಲ್ಲಿ ಜೆಡಿಎಸ್ ಸಂಬಾವ್ಯ ಅಭ್ಯರ್ಥಿಯಾಗಿ ಹಾಜಿ ಸೈಯ್ಯದ್ ಮೀರಾ ಸಾಹೇಬ್ ?

 

ಕುಟ್ರುಪಾಡಿ ಗ್ರಾಮ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಒಳಾಂಗಣ ಕ್ರೀಡೋತ್ಸವ ಕಾರ್ಯಕ್ರಮವು ಡಿ. 09 ರಂದು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ ಅಂಗನವಾಡಿ ಮಕ್ಕಳಿಗೆ, ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಬಳಿಕ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

Also Read  ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: 21ನೇ ಆರೋಪಿಯನ್ನು ಬಂಧಿಸಿದ ಎನ್ ಐಎ

ಕಾರ್ಯಕ್ರಮವನ್ನು ಕುಂಞಪ್ಪ ಗೌಡ ಕೊಡೆಂಕಿರಿ ಉದ್ಘಾಟಿಸಲಿದ್ದು, ಒಕ್ಕಲಿಗ ಗೌಡ ಸೇವಾ ಸಂಘದ ಕಡಬ ವಲಯ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಳಿನೆಲೆ ಸಿ.ಎ ಬ್ಯಾಂಕ್ ನಿರ್ದೇಶಕ ವಾಡ್ಯಪ್ಪ ಗೌಡ ಎರ್ಮಾಯಿಲ್, ಕಡಬ ಸಿ.ಎ ಬ್ಯಾಂಕ್ ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್., ಸಂಘದ ಪೂರ್ವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಗಣೇಶ್ ಕೈಕುರೆ, ಮಹಿಳಾ ಘಟಕದ ಅಧ್ಯಕ್ಷೆ ನೀಲಾವತಿ ಶಿವರಾಮ, ಕಾರ್ಯದರ್ಶಿ ಮಂಜುನಾಥ ಕೋಲಂತ್ತಾಡಿ, ಖಜಾಂಜಿ ಜಯರಾಮ ಆರ್ತಿಲ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top