ನೆಟ್ಟಣ: ನಾಡಿಗೆ ಲಗ್ಗೆಯಿಟ್ಟ ಕಾಡಾನೆ ► ತೆಂಗಿನ ಮರ, ಮನೆಯ ತಡೆಗೋಡೆ ಧ್ವಂಸ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಳೆದ ಕೆಲವು ದಿನಗಳಿಂದ ನಾಡಿನಿಂದ ದೂರ ಉಳಿದಿದ್ದ ಕಾಡಾನೆಯು ಶುಕ್ರವಾರದಂದು ನಾಡಿಗೆ ಲಗ್ಗೆ ಇಟ್ಟಿದ್ದು, ನೆಟ್ಟಣ, ಬಿಳಿನೆಲೆ ಪರಿಸರ ನಿವಾಸಿಗಳು ಭಯಭೀತರಾಗಿದ್ದಾರೆ.

ನೆಟ್ಟಣ ಪೇಟೆಯಲ್ಲಿನ ಅಬ್ದುಲ್ ರಹಿಮಾನ್ ಹಾಜಿ ಎಂಬವರ ಮನೆಯ ಪಕ್ಕದ ತೋಟದ ಬೇಲಿಯನ್ನು ಧ್ವಂಸಗೊಳಿಸಿರುವ ಕಾಡಾನೆಯು ತೆಂಗಿನ ಮರವನ್ನು ಹಾನಿಗೆಡವಿದೆ. ಇನ್ನೊಂದೆಡೆ ಬಿಳಿನೆಲೆಯಲ್ಲಿಯೂ ಕಾಡಾನೆಯ ಪುಂಡಾಟ ಜೋರಾಗಿದ್ದು, ಮನೆಯೊಂದರ ತಡೆಗೋಡೆಯನ್ನೇ ಪುಡಿಗಟ್ಟಿದೆ. ಬಿಳಿನೆಲೆ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದು, ಶುಕ್ರವಾರ ರಾತ್ರಿ ವೇಳೆಗೆ ಪೋಷಕರೋರ್ವರು ಶಾಲೆಗೆ ತೆರಳಿ ಹಿಂತಿರುಗುತ್ತಿದ್ದಾಗ ಕಾಡಾನೆ ಅಟ್ಟಿಸಿಕೊಂಡು ಹೋಗಿದೆ ಎನ್ನಲಾಗಿದೆ. ಜನನಿಬಿಡ ಪ್ರದೇಶಕ್ಕೂ ಕಾಡಾನೆ ಲಗ್ಗೆ ಇಟ್ಟಿರುವುದು ಪರಿಸರದ ಜನರ ಆತಂಕಕ್ಕೆ ಕಾರಣವಾಗಿದೆ.

Also Read  ಉಡುಪಿ: ಯುವಕರ ಜೊತೆ ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

error: Content is protected !!
Scroll to Top