ಮೂಡುಬಿದಿರೆ: ಪತ್ನಿಗೆ ಕತ್ತಿಯಿಂದ ಕಡಿದು ಬಾವಿಗೆ ಹಾರಿದ ಪತಿ ► ಮುಂದೇನಾಯಿತು ಗೊತ್ತೇ…?

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಡಿ.08. ಪತ್ನಿಗೆ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ರಕ್ಷಿಸಿದ ಘಟನೆ ಮೂಡುಬಿದಿರೆಯಲ್ಲಿ ಶುಕ್ರವಾರ ನಡೆದಿದೆ.

ಹೊಟೇಲ್ ಉದ್ಯೋಗಿಯಾಗಿರುವ
ಕುಪ್ಪೆಪದವು ನಿವಾಸಿ ರವಿರಾಜ್ ಶೆಟ್ಟಿ ಎಂಬವರಿಗೆ ಪಡುಮಾರ್ನಾಡು ನಿವಾಸಿ ಶಾಲಾ ಶಿಕ್ಷಕಿ ಸೌಮ್ಯ ಎಂಬಾಕೆಯ ಜೊತೆ ವಿವಾಹವಾಗಿದ್ದು, ಮದುವೆಯಾದ ಕೆಲವೇ ತಿಂಗಳಲ್ಲಿ ದಂಪತಿ ಮಧ್ಯೆ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಸೌಮ್ಯ ಪತಿಯಿಂದ ದೂರವಾಗಿ ತನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಇದರಿಂದ ನೊಂದಿದ್ದ ರವಿರಾಜ್ ಶುಕ್ರವಾರದಂದು ಸೌಮ್ಯ ಪಡುಮಾರ್ನಾಡಿನಲ್ಲಿ ಶಾಲೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದಾಗ ಬಂದು ಹಲ್ಲೆ ನಡೆಸಿದ್ದಾರೆ. ಘಟನೆ ಕಂಡು ಅಕ್ಕಪಕ್ಕದವರು ಧಾವಿಸಿ ಬಂದಾಗ ಆರೋಪಿಯು ಅಲ್ಲಿಂದ ಪರಾರಿಯಾಗಿ ಪತ್ನಿಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸುದ್ದಿ ತಿಳಿದು ಸ್ಥಳೀಯರು ಆಗಮಿಸಿ ರವಿರಾಜ್ ಅವರನ್ನು ರಕ್ಷಿಸಿದ್ದಾರೆ.

Also Read  ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಮೃತ್ಯು

ಘಟನೆಯ ಬಗ್ಗೆ ಮೂಡುಬಿದಿರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಮುಂದುವರೆಸಿದ್ದಾರೆ.

error: Content is protected !!