ಕಡಬ: 108 ಆಂಬ್ಯಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಏಳು ತಿಂಗಳ ಗರ್ಭಿಣಿ

(ನ್ಯೂಸ್ ಕಡಬ) newskadaba.com ಕಡಬ, ಡಿ.06. ಏಳು ತಿಂಗಳ ಗರ್ಭಿಣಿಯೋರ್ವರು 108 ಆಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ರಾತ್ರಿ ಸವಣೂರು ಬಳಿ ಸಂಭವಿಸಿದೆ.

102 ನೆಕ್ಕಿಲಾಡಿ ಗ್ರಾಮದ ಗುರಿಯಡ್ಕ ನಿವಾಸಿ ಹೇಮಲತಾ(32) ಎಂಬಾಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಹೊಟ್ಟೆ ನೋವು ಕಂಡುಬಂದ ಹಿನ್ನೆಲೆಯಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ ಆಗಮಿಸಿದ್ದರು. ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ತೆರಳುವಂತೆ ಸೂಚಿಸಿದ ಕಾರಣ ಕಡಬದ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ತೆರಳುತ್ತಿದ್ದಾಗ ಸವಣೂರು ಬಳಿ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ. ತಾಯಿ – ಮಗು ಆರೋಗ್ಯದಿಂದಿದ್ದು, ಸುಸೂತ್ರ ಹೆರಿಗೆಗೆ 108 ಆಂಬ್ಯುಲೆನ್ಸ್ ಇಎಂಟಿ ಚಂದ್ರಶೇಖರ್ ಹಾಗೂ ಪೈಲಟ್ ಚಂದ್ರಶೇಖರ ಗೌಡ ಸಹಕರಿಸಿದರು. ಈ ಹಿಂದೆಯೂ ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಹಲವು ಹೆರಿಗೆಗಳನ್ನು ಸುಸೂತ್ರವಾಗಿ ನಡೆಸಿದ ಕೀರ್ತಿ ಇವರಿಗೆ ಸಲ್ಲಬೇಕಿದೆ.

Also Read  ಪ.ವರ್ಗ ಕಾನೂನು ಪದವೀಧರರಿಗೆ ತರಬೇತಿ

error: Content is protected !!
Scroll to Top