ಕಡಬ: ಹಾವು ಕಡಿದು ಮಹಿಳೆ ಮೃತ್ಯು ► ರಬ್ಬರ್ ಶೀಟ್ ಒಣಗಿಸಲು ತೆರಳುತ್ತಿದ್ದಾಗ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.05. ರಬ್ಬರ್ ಶೀಟ್ ಮಾಡಲು ತೆರಳುತ್ತಿದ್ದ ವೇಳೆ ವಿಷ ಜಂತು ಕಡಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ಕಡಬದ ಕುಟ್ರುಪಾಡಿಯಲ್ಲಿ ಮಂಗಳವಾರದಂದು ನಡೆದಿದೆ.

ಮೃತ ಮಹಿಳೆಯನ್ನು ಕುಟ್ರುಪಾಡಿ ಗ್ರಾಮದ ಬಳ್ಳಿತ್ತಡ್ಡ ವಿಶ್ವನಾಥ ಗೌಡ ಎಂಬವರ ಪತ್ನಿ ಕಮಲಾಕ್ಷಿ(55ವ.) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ತನ್ನ ಮನೆಯ ಸಮೀಪದಲ್ಲಿ ರಬ್ಬರ್ ಶೀಟ್ ಒಣಗಿಸಲು ಹೋಗುತ್ತಿದ್ದ ವೇಳೆ ವಿಷ ಜಂತು ಕಚ್ಚಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೃತರು ಪುತ್ರಿ ಭವ್ಯ, ಪುತ್ರ ಉಮೇಶ್‍ರವರನ್ನು ಅಗಲಿದ್ದಾರೆ.

Also Read  ಮಂಗಳೂರು: ಎರಡನೇ ದಿನವೂ ಮುಂದುವರಿದ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ➤ ಯು.ಟಿ ಖಾದರ್ ಸಹೋದರನ ಮನೆಗೂ ದಾಳಿ

error: Content is protected !!
Scroll to Top