ಅಡ್ಯಾರ್: ಗ್ಯಾಸ್ ಟ್ಯಾಂಕರ್ ಗೆ ಹಿಂದಿನಿಂದ ಬಸ್ ಢಿಕ್ಕಿ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04. ಗ್ಯಾಸ್ ಟ್ಯಾಂಕರಿಗೆ ಸರಕಾರಿ ಬಸ್ಸೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ನಗರದ ಹೊರವಲಯದ ಅಡ್ಯಾರ್ ಕಣ್ಣೂರು ಬಳಿ ಮಂಗಳವಾರದಂದು ನಡೆದಿದೆ.

ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಮುಂಭಾಗದಲ್ಲಿದ್ದ ವಾಹನವು ಹಠಾತ್ತನೆ ಬಲಬದಿಗೆ ತಿರುಗಿದ ಕಾರಣ ಟ್ಯಾಂಕರ್ ಚಾಲಕ ಬ್ರೇಕ್ ಹಾಕಿದ್ದು, ಈ ವೇಳೆ ಹಿಂದಿನಿಂದ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪ್ರಯಾಣಿಕರಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Also Read  ಅಂಗನವಾಡಿಗಳಿಗೆ ಅಕ್ಕಿ,ಗೋಧಿ ಸಾಗಾಣಿಕೆ- ಟೆಂಡರ್ ಅರ್ಜಿ ಆಹ್ವಾನ

error: Content is protected !!
Scroll to Top