ಕಡಬ: ಕೌಟುಂಬಿಕ ಕಲಹದ ಹಿನ್ನೆಲೆ ► ಮೆಸ್ಕಾಂ ಉದ್ಯೋಗಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಡಿ.01. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೆಸ್ಕಾಂ ಉದ್ಯೋಗಿಯೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರದಂದು ಕಲ್ಲಾಜೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕಡಬ ಮೆಸ್ಕಾಂ ಸಬ್ ಸ್ಟೇಷನ್ ನಲ್ಲಿ ವಿದ್ಯುತ್ ಪರಿಕರಗಳ ಓಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಂಕದಕಟ್ಟೆ ಮೂಜೂರು ಬೈಲು ನಿವಾಸಿ ಹರೀಶ್ (33) ಎಂದು ಗುರುತಿಸಲಾಗಿದೆ. ವಿವಾಹಿತರಾಗಿದ್ದ ಇವರು ಪತ್ನಿಯ ಮೇಲೆ ನಿರಂತರ ಹಲ್ಲೆಗೈಯ್ಯುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ಪತ್ನಿ ನೀಡಿದ್ದ ದೂರಿನಂತೆ ಶುಕ್ರವಾರದಂದು ಹರೀಶ್ ನನ್ನು ಕಡಬ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ಬಳಿಕ ನಾಪತ್ತೆಯಾಗಿದ್ದ ಹರೀಶ್ ನನ್ನು ಹುಡುಕಾಡಿ ಪತ್ತೆಯಾಗದಿದ್ದು, ಶನಿವಾರ ರಾತ್ರಿ ವೇಳೆಗೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಕ್ಕದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Also Read  ಉಡುಪಿ: ಮಾಜಿ ಶಾಸಕ ಯು.ಆರ್. ಸಭಾಪತಿ‌ ನಿಧನ

error: Content is protected !!
Scroll to Top