ಕಡಬ ತಾಲೂಕು ಉದ್ಘಾಟನೆ ಮುಂದೂಡಿರುವುದು ನೋವು ತಂದಿದೆ ► ಕೂಡಲೇ ತಾಲೂಕು ಅನುಷ್ಠಾನಕ್ಕೆ ಸರಕಾರ ಮುಂದಾಗಬೇಕು: ಕೃಷ್ಣ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ನ.26. ಆರು ದಶಕಗಳ ಕಡಬ ತಾಲೂಕು ಬೇಡಿಕೆ ಕೊನೆಗೂ ಈಡೇರುತ್ತದೆ ಎನ್ನುವ ಸಂದರ್ಭ ಒದಗಿ ಬಂದಾಗ ಹಠಾತ್ತನೆ ಉದ್ಘಾಟನಾ ಸಮಾರಂಭ ರದ್ದಾಗಿರುವುದು ನೋವು ತಂದಿದ್ದು, ಆದಷ್ಟು ಬೇಗ ಕಡಬ ತಾಲೂಕನ್ನು ಉದ್ಘಾಟಿಸಬೇಕೆಂದು ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕರಾದ ಕೃಷ್ಣ ಶೆಟ್ಟಿ ಕಡಬ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಭಾನುವಾರದಂದು ನಡೆಯಬೇಕಿದ್ದ ಕಡಬ ತಾಲೂಕು ಉದ್ಘಾಟನೆಯನ್ನು ಮುಂದೂಡಲಾಗಿದ್ದು, ಆರು ವರ್ಷಗಳ ಹಿಂದೆ ಒಮ್ಮೆ ಘೋಷಣೆಯಾದ ಕಡಬ ತಾಲೂಕನ್ನು ರಾಜಕೀಯ ಕಾರಣಕ್ಕೆ ಅನುಷ್ಟಾನ ಮಾಡದೆ ಸ್ಥಗಿತಗೊಳಿಸಿ ಕಾಂಗ್ರೆಸ್ ಸರಕಾರವು ಮತ್ತೊಮ್ಮೆ ಘೋಷಣೆ ಮಾಡಿ ರಾಜಕೀಯ ಲಾಭ ಮಾಡಲು ಹೊರಟಿತ್ತು. ಅನೇಕ ಬಾರಿ ವೇದಿಕೆ, ಭಾಷಣಕ್ಕೆ ಸೀಮಿತಗೊಳಿಸಿ ಉದ್ಘಾಟನಾ ಕಾರ್ಯವನ್ನು ಮುಂದೂಡುತ್ತಲೇ ಬರಲಾಗಿದೆ. ಭಾನುವಾರ ಉದ್ಘಾಟನೆ ಮುಂದೂಡಲ್ಪಟ್ಟಿದ್ದು ಅನಿವಾರ್ಯ. ಆದರೆ ಈ ಹಿಂದೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಲಾಗಿತ್ತು. ಇನ್ನಾದರೂ ಕಡಬದ ಸಮಸ್ತ ಜನತೆಯನ್ನು ಒಗ್ಗೂಡಿಸಿಕೊಂಡು ಕೂಡಲೇ ತಾಲೂಕು ಅನುಷ್ಠಾನಕ್ಕೆ ಸರಕಾರವು ಮುಂದಾಗಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Also Read  ಜಾನಪದ ನೃತ್ಯ ಸ್ಪರ್ಧೆಯಲ್ಲಿ ಎಣ್ಮೂರು ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

error: Content is protected !!
Scroll to Top