(ನ್ಯೂಸ್ ಕಡಬ) newskadaba.com ಕಡಬ, ನ.25. ಪರಿಸರದ ಜನತೆಯ ಬಹು ದಶಕಗಳ ಬೇಡಿಕೆಯಾದ ‘ನೂತನ ಕಡಬ ತಾಲೂಕು ಉದ್ಘಾಟನೆ’ ನೆರವೇರಲು ಕೆಲವೇ ತಾಸುಗಳು ಬಾಕಿ ಉಳಿದಿರುವಾಗ ತಾಲೂಕು ಉದ್ಘಾಟನೆಗೆ ಮತ್ತೊಂದು ವಿಘ್ನ ಎದುರಾಗಿದ್ದು, ಉದ್ಘಾಟನಾ ಸಮಾರಂಭವನ್ನು ಕೊನೆಯ ಕ್ಷಣದಲ್ಲಿ ರದ್ದಾಗಿದೆ.
ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಜದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶೋಕಾಚರಣೆ ನಡೆಯುತ್ತಿರುವುದರಿಂದ ಭಾನುವಾರದಂದು ನಡೆಯಬೇಕಾಗಿದ್ದ ಕಡಬ ಹಾಗೂ ಮೂಡಬಿದಿರೆ ತಾಲೂಕು ಉದ್ಘಾಟನಾ ಕಾರ್ಯವನ್ನು ಮುಂದೂಡಲಾಗಿದೆ. ಅಂತೂ ಕಡಬ ತಾಲೂಕು ಉದ್ಘಾಟನಾ ಸಮಾರಂಭವನ್ನು ವಿವಿಧ ಕಾರಣಗಳಿಗಾಗಿ ನಾಲ್ಕು ಬಾರಿ ಮುಂದೂಡಲಾಗಿದ್ದು, ಕಡಬಕ್ಕೆ ತಾಲೂಕಾಗುವಲ್ಲಿ ಯಾವುದಾದರೊಂದು ತೊಡಕು ಇದ್ದೇ ಇದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
Also Read ಕೊರೋನಾ ಲಾಕ್‌ಡೌನ್ ಹಿನ್ನೆಲೆ ➤ ನಾಳೆಯಿಂದ ಕಡಬದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ನಡೆಸಲು ನಿರ್ಧಾರ